HEALTH TIPS

ಎಲೆಕ್ಟ್ರಿಕ್ ಕಾರಿಗೆ 'ಪಿಯುಸಿ' ಪತ್ರವಿಲ್ಲವೆಂದು ದಂಡ: ಹೌಹಾರಿದ ನೆಟ್ಟಿಗರು!

ಜೈಪುರ: ಎಲೆಕ್ಟ್ರಿಕ್ ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಇಲ್ಲ ಎಂಬ ಕಾರಣಕ್ಕೆ ಪೊಲೀಸರು ದಂಡ ವಿಧಿಸಿರುವ ವಿಲಕ್ಷಣ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಟಾಟಾ ಟಿಯಾಗೊ ಇವಿ ಮಾಲೀಕರಿಗೆ ಪೊಲೀಸರು ದಂಡ ಹಾಕಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಬೇಕಿಲ್ಲ ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ಪೊಲೀಸರು ನಮ್ಮ ನಡುವೆ ಇದ್ದಾರೆ ಎಂದು ನೆಟ್ಟಿಗರು ಹೌಹಾರಿದ್ದಾರೆ.


ನಡೆದಿದ್ದೇನು?:

ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಟಾಟಾ ಟಿಯಾಗೊ ಇವಿ ಕಾರಿನ ವಿಂಡ್‌ಶೀಲ್ಡ್‌ಗೆ ಶೇಡ್‌ಗಳನ್ನು ಬಳಸಿದ್ದಕ್ಕಾಗಿ ಅಸಿಸ್ಟೆಂಟ್‌ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಕಾರನ್ನು ತಡೆದಿದ್ದಾರೆ. ಈ ವೇಳೆ ಕಾರು ಚಾಲಕ ಮತ್ತು ಪೊಲೀಸ್ ಅಧಿಕಾರಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ನಂತರ ವಿಂಡ್‌ಶೀಲ್ಡ್‌ಗೆ ಶೇಡ್‌ಗಳನ್ನು ಬಳಸಿದ್ದಕ್ಕಾಗಿ ಮೊದಲು ₹ 200 ದಂಡ ಹಾಕಿದ್ದಾರೆ. ತದನಂತರ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಇಲ್ಲ ಎಂಬ ಕಾರಣ ನೀಡಿ ₹ 1,500 ದಂಡ ವಿಧಿಸಿ ಚಲನ್ ನೀಡಿದ್ದಾರೆ.

ಇದು ಎಲೆಕ್ಟ್ರಿಕ್ ಕಾರು ಇದಕ್ಕೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಅಗತ್ಯವಿಲ್ಲ ಎಂದು ಕಾರಿನ ಮಾಲೀಕರು ಎಷ್ಟೇ ವಾದಿಸಿದರೂ ಅಧಿಕಾರಿ ಮಾತ್ರ ಕಿವಿಗೊಡದೆ ದಂಡ ವಿಧಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪೊಲೀಸ್ ಇಲಾಖೆ ಪ್ರತಿಕ್ರಿಯೆ...

ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ. ಕಾರಿನ ವಿಂಡ್‌ಶೀಲ್ಡ್‌ ಪರದೆಗಳ ವಿಚಾರವಾಗಿ ಚಾಲಕ ಮತ್ತು ಪೊಲೀಸ್‌ ಅಧಿಕಾರಿ ನಡುವೆ ಗಲಾಟೆ ನಡೆದಿದೆ. ಗೊಂದಲದಲ್ಲಿ ತಪ್ಪಾಗಿ ಪಿಯುಸಿ ಉಲ್ಲಂಘನೆಯ ದಂಡ ವಿಧಿಸಲಾಗಿದೆ ಎಂದು ಇಲಾಖೆ ಒಪ್ಪಿಕೊಂಡಿದೆ.

ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ತಪ್ಪಾಗಿ ವಿಧಿಸಿರುವ ದಂಡವನ್ನು ರದ್ದುಗೊಳಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ನಿಯಮ ಏನು ಹೇಳುತ್ತದೆ?

ಕೇಂದ್ರ ಮೋಟಾರು ವಾಹನಗಳ ನಿಯಮ (CMVR) 1989ರ ಪ್ರಕಾರ ಎಲೆಕ್ಟ್ರಿಕ್ ವಾಹನಗಳು (EV) ಬ್ಯಾಟರಿ ಚಾಲಿತವಾಗಿದ್ದು, ಯಾವುದೇ ಹೊಗೆಯನ್ನು ಹೊರಸೂಸುವುದಿಲ್ಲ. ಹಾಗಾಗಿ ಇವುಗಳಿಗೆ ಪಿಯುಸಿ ಪ್ರಮಾಣಪತ್ರದ ಅಗತ್ಯವಿರುವುದಿಲ್ಲ ಎಂದು ಹೇಳುತ್ತದೆ.

ಇವಿ ವಾಹನಗಳು ಪಿಯುಸಿ ತಪಾಸಣೆಯಿಂದ ಸಂಪೂರ್ಣ ವಿನಾಯಿತಿ ಪಡೆದಿವೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕೃತ ಆದೇಶಗಳು ತಿಳಿಸುತ್ತವೆ

ಪೆಟ್ರೋಲ್, ಡೀಸೆಲ್ ಅಥವಾ ಸಿಎನ್‌ಜಿಯಂತಹ ಪಳೆಯುಳಿಕೆ ಇಂಧನ ಬಳಸಿ ಓಡುವ ವಾಹನಗಳಿಗೆ ಮಾತ್ರ ಮಾಲಿನ್ಯ ತಪಾಸಣೆ ಕಡ್ಡಾಯವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries