ಬದಿಯಡ್ಕ: ಪಿಲಾಂಕಟ್ಟೆ ಸಮೀಪದ ಚೋಕೆಮೂಲೆ ಶ್ರೀ ರಾಜಗುಳಿಗ ಸನ್ನಿಧಿಯಲ್ಲಿ ವರ್ಷಾವಧಿ ನಡೆಯುವ ಕೋಲ ಮಂಗಳವಾರ ಸಂಪನ್ನಗೊಂಡಿತ್ತು.
ಇದರಂಗವಾಗಿ ಬೆಳಗ್ಗೆ ಶುದ್ಧಿಕಲಶ, ಮಧ್ಯಾಹ್ನ ಶ್ರೀ ರಾಜಗುಳಿಗ ದೈವದ ಕೋಲ, ಪ್ರಸಾದ ವಿತರಣೆ, ಭೋಜನ ಪ್ರಸಾದದೊಂದಿಗೆ ಸಮಾಪ್ತಿಗೊಂಡಿತ್ತು. ಸಂಕ್ರಮಣದಂಗವಾಗಿ ನಡೆದ ಕೋಲದಲ್ಲಿ ಗ್ರಾಮದ ನೂರಾರು ಮಂದಿ ಭಕ್ತರು ಭಾಗವಹಿಸಿದರು.

.jpg)
