ಬದಿಯಡ್ಕ: ನಾರಂಪಾಡಿ ಗುತ್ತು ದೈವಸ್ಥಾನದಲ್ಲಿ ಏ.17 ರಿಂದ 19ರ ತನಕ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಕಾರ್ಮಿಕತ್ವದಲ್ಲಿ ಶ್ರೀ ನಾಗತಂಬಿಲ, ದೈವಗಳಿಗೆ ತಂಬಿಲ ಹಾಗೂ ದೈವಗಳ ನೇಮವು ವಿವಿಧ ವೈದಿಕ, ಧಾರ್ಮಿಕ ಮತ್ತು ದೈವಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇದರಂಗವಾಗಿ ಏ.17 ರಂದು ಗಣಪತಿ ಹೋಮ, ಶ್ರೀ ನಾಗತಂಬಿಲ, ಶ್ರೀ ದೈವಗಳ ತಂಬಿಲ, ಅನ್ನಪ್ರಸಾದ, ಭಜನೆ, ಸಂಜೆ ಶ್ರೀ ವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ ಹಾಗೂ ಶ್ರೀಧೂಮಾವತಿ ಮತ್ತು ಪರಿವಾರ ದೈವಗಳ ಭಂಡಾರ ಏರುವುದು. ರಾತ್ರಿ ದೈವಗಳ ತೊಡಂಙಲ್, ಮೋಂದಿಕೋಲ ನಡೆಯಲಿದೆ. ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, ಕೊರತ್ತಿ ದೈವದ ಕೋಲ ನಡೆಯಲಿದೆ. ಏ.18 ರಂದು ಬೆಳಗ್ಗೆ ಶ್ರೀ ರಕ್ತೇಶ್ವರಿ, ವಿಷ್ಣುಮೂರ್ತಿ, ಧೂಮಾವತಿ ಮತ್ತು ಪರಿವಾರ ದೈವಗಳ ನೇಮ ನಡೆಯಲಿದೆ. ಸಂಜೆ ಭಜನೆ, ದೀಪಾರಾಧನೆ, ರಾತ್ರಿ ಕುಪ್ಪೆ ಪಂಜುರ್ಲಿ, ವರ್ಣರ ಪಂಜುರ್ಲಿ ದೈವಗಳ ಭಂಡಾರ ಏರುವುದು. ರಾತ್ರಿ ಕುಪ್ಪೆ ಪಂಜುರ್ಲಿ ಹಾಗೂ ವರ್ಣರ ಪಂಜುರ್ಲಿ ದೈವದ ನೇಮ ನಡೆಯಲಿದೆ. ಏ.19 ರಂದು ಶ್ರೀ ಬೀರ್ಣಾಳ್ವ ದೈವದ ಭಂಡಾರ ಏರುವುದು, ನೇಮ, ಧರ್ಮದೈವ ಶ್ರೀ ಮಲರಾಯಿ ದೈವದ ಭಂಡಾರ ಏರುವುದು, ನೇಮ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಶ್ರೀ ಗುಳಿಗ ದೈವದ ಕೋಲ, ಭಂಡಾರ ಇಳಿಯುವುದು, ಶ್ರೀ ರಾಹು ಗುಳಿಗನಿಗೆ ಬಡಿಸುವುದು, ಗುರುಹಿರಿಯರಿಗೆ ಬಡಿಸುವುದು, ಅನ್ನಪ್ರಸಾದದೊಂದಿಗೆ ಸಂಪನ್ನಗೊಳ್ಳುವುದು.

