ಬದಿಯಡ್ಕ: ಉಬ್ರಂಗಳ ಅಗಲ್ಪಾಡಿ ನಡುಮನೆ ಪಡಿಪ್ಪುರೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವ (ಕೆಂಡಸೇವೆ)ಯು ಏ.17 ಮತ್ತು 18 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಇದರಂಗವಾಗಿ ಏ.17 ರಂದು ಬೆಳಗ್ಗೆ ಮೇಲೇರಿ ಕೂಡಿಸುವುದು, ಸಂಜೆ ಉಬ್ರಂಗಳ ಶ್ರೀ ಐವರು ವಿಷ್ಣುಮೂರ್ತಿ ಚಾಮುಂಡಿ ದೈವಸ್ಥಾನದಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಭಂಡಾರ ಹೊರಡುವುದು, ಸಂಜೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶಾಸ್ತಾರ ಸನ್ನಿಧಿಗೆ ಭಂಡಾರ ತಲುಪಿದ ಬಳಿಕ ದೇವಾಲಯದಲ್ಲಿ ಕಾರ್ತಿಕ ಪೂಜೆ ನಡೆಯುವುದು. ರಾತ್ರಿ ಮೇಲೇರಿಗೆ ಅಗ್ನಿ ಸ್ಪರ್ಶ, ಅನ್ನದಾನ, ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುವುದು. ಶ್ರೀ ದೈವದ ಕುಳಿಚ್ಚಾಟ ನಡೆಯಲಿದೆ.
ಏ.18 ರಂದು ಮುಂಜಾನೆ ಶ್ರೀ ದೈವದ ಮೇಲೇರಿ ಪ್ರವೇಶ, ಅರಸಿನ ಹುಡಿ ಪ್ರಸಾದ ವಿತರಣೆ, ಭಂಡಾರ ಹೊರಡುವುದರೊಂದಿಗೆ ಸಮಾಪ್ತಿಗೊಳ್ಳುವುದು.

