HEALTH TIPS

ಆಧ್ಯಾತ್ಮಿಕ ಉನ್ನತಿಯಿಂದ ಭವ್ಯ ಭಾರತ ನಿರ್ಮಾಣ : ಒಡಿಯೂರು ಶ್ರೀ

ಕಾಸರಗೋಡು: ಆಧ್ಯಾತ್ಮವೇ ಭಾರತದ ತಿರುಳು. ಆಧ್ಯಾತ್ಮಿಕ ಉನ್ನತಿಯಿಂದ ಭವ್ಯ ಭಾರತ ನಿರ್ಮಾಣ ಸಾಧ್ಯ. ವ್ಯಕ್ತಿ ವಿಕಾಸದಿಂದ ದೇಶ ವಿಕಾಸ. ಇಂದಿನ ದಶಮಾನೋತ್ಸವ ಎಂಬುದು ಶತಮಾನೋತ್ಸವದ ಮುನ್ನುಡಿ. ಶಿಕ್ಷಕರು ಮತ್ತು ಪೆÇೀಷಕರ ಮೂಲಕ ಪ್ರಜ್ಞಾವಂತರ ಸೃಷ್ಟಿ. ಭಾರತವೆಂಬ ರಥಕ್ಕೆ ಸಾರಥಿಯಾಗಬೇಕು. `Àರ್ಮ ಸಂಸ್ಕøತಿ ಜಾಗೃತಿಯಿಂದ ಸನಾತನ `Àರ್ಮಕ್ಕೆ ಶಕ್ತಿ ತುಂಬುತ್ತದೆ. `Áರತೀಯ ಮೌಲ್ಯ ಬೆಳಗಿಸುವ ಕಾರ್ಯ ಅತ್ಯಂತ ಶ್ರೇಷ್ಠ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.


ನುಳ್ಳಿಪ್ಪಾಡಿ ಕೋಟೆಕಣಿ ಅಡ್ಡ ರಸ್ತೆಯ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ ಸಂಭ್ರಮದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿ ಸ್ವಾಮೀಜಿ ಮಾತನಾಡಿದರು. ರವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಸತ್ಸಂಗ ಪ್ರಮುಖ್ ಕೈತಪ್ರಂ ಮಾಧವನ್ ನಂಬೂದಿರಿ ಧಾರ್ಮಿಕ ಉಪನ್ಯಾಸ ನೀಡಿದರು. 

ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ ಅಧ್ಯಕ್ಷ ವರಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದರು. ಬಾಲಗೋಕುಲ ಕಾಸರಗೋಡು ನಗರ ಅಧ್ಯಕ್ಷ ಭಾಗ್ಯರಾಜ್ ನುಳ್ಳಿಪ್ಪಾಡಿ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಕಾಸರಗೋಡು ನಗರಸಭಾ ಸದಸ್ಯೆ ದಿವ್ಯಾ ಸಂದೀಪ್, ಕಾಸರಗೋಡು ತಾಲೂಕು ಬಾಲಗೋಕುಲ ರಕ್ಷಾಧಿಕಾರಿ ಪ್ರವೀಣ್ ಕುಮಾರ್, ಮಧೂರು ಗ್ರಾಮ ಪಂಚಾಯತ್ ಸದಸ್ಯೆ, ಬಾಲಗೋಕುಲದ ಶಿಕ್ಷಕಿ ದೀಪ್ತಿ ಮೋದಕ್ ರಾಜ್, ಪತ್ರಕರ್ತ ಪ್ರದೀಪ್ ಬೇಕಲ್, ಸುನಂದ ಸುಧಾಕರ ಕೋಟೆಕಾರ್ ಉಪಸ್ಥಿತರಿದ್ದರು.

ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ ಕಾರ್ಯದರ್ಶಿ ಮೋದಕ್‍ರಾಜ್ ಸ್ವಾಗತಿಸಿ, ದೇವದಾಸ್ ನುಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಧನೇಶ್ ಕೋಟೆಕಣಿ ವಂದಿಸಿದರು.

ಸಭಾ ಕಾರ್ಯಕ್ರೆ ಮುನ್ನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕೊಂಡೆವೂರು ಸಹೋದರಿಯರಿಂದ ವಾದ್ಯ ಸಂಗೀತ ಕಾರ್ಯಕ್ರಮ `ನಾದ ನಿನಾದ' ಹಾಗು ಬಾಲಗೋಕುಲ ಮಕ್ಕಳಿಂದ ನೃತ್ಯ ವೈಭವ ಜರಗಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries