HEALTH TIPS

ರಂಗ ಚೇತನದ ಮಕ್ಕಳ ಶಿಬಿರ 'ಚಿತ್ತಾರ-26' ಸಂಪನ್ನ

ಕುಂಬಳೆ: ಕನ್ನಡ ಅಧ್ಯಾಪಕರ ಸಾಂಸ್ಕøತಿಕ ಮತ್ತು ಸಾಹಿತ್ಯ ವೇದಿಕೆಯಾದ ರಂಗ ಚೇತನ ಕಾಸರಗೋಡು ಇದರ ಆಶ್ರಯದಲ್ಲಿ ಆರನೇ ವರ್ಷದ ಮಕ್ಕಳ ಬೇಸಿಗೆ ಶಿಬಿರ 'ಚಿಣ್ಣರ ದೃಶ್ಯ ಕಾವ್ಯ, ಚಿತ್ತಾರ 26' ಏ. 11 ರಿಂದ 13ರ ವರೆಗೆ ಚೇವಾರು ಎಸ್.ಎಸ್.ಯು.ಪಿ. ಶಾಲೆಯಲ್ಲಿ ನಡೆಯಿತು. 


ಏ. 11 ರಂದು ಸಂಘಟನೆಯ ಅಧ್ಯಕ್ಷ ಯತೀಶ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಜಾರ್ಜ್ ಕ್ರಾಸ್ತಾ ಶಿಬಿರವನ್ನು ಉದ್ಘಾಟಿಸಿದರು. ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕ ಸಂಘದ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ, ಕಣಿಪುರ ಪತ್ರಿಕೆ ಸಂಪಾದಕ  ನಾರಾಯಣ ಚಂಬಲ್ತಿಮಾರ್ ಮುಖ್ಯ ಅತಿಥಿಯಾಗಿದ್ದರು. ಕಾಸರಗೋಡು ಜಿಲ್ಲೆಯಿಂದ ಆಯ್ದ 50  ಪ್ರತಿಭಾನ್ವಿತ ಮಕ್ಕಳು ಮೂರು ದಿನದ ಸನಿವಾಸ ಶಿಬಿರದಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿದರು. ರಂಗಕಲೆ, ಅಭಿನಯ, ಸಂವಹನ, ಮಾಯಾಜಾಲ, ಮಿಮಿಕ್ರಿ, ಪಕ್ಷಿ ವೀಕ್ಷಣೆ, ಕಲಾವಿದರ ಭವನ ಸಂದರ್ಶನ, ನಾಟಕ-ಸಂಭಾಷಣೆ ರಂಗಗೀತೆ, ರಂಗದ ನೆರಳು ಬೆಳಕು, ರಂಗ ಪರಿಕರ ತಯಾರಿ, ಯೋಗ, ರಂಗ ವಿನ್ಯಾಸ, ಆವಿಷ್ಕಾರ ವಿಷಯಗಳಲ್ಲಿ ಶಿಬಿರದ ನಿರ್ದೇಶಕರಾಗಿದ್ದ ದಿವಾಕರ್ ಬಳ್ಳಾಲ್, ಸದಾಶಿವ ಬಾಲ ಮಿತ್ರ, ನಿರ್ಮಲ್ ಕುಮಾರ್, ಬಾಲಸುಬ್ರಹ್ಮಣ್ಯಂ, ಸುರೇಶ್ ಯಾದವ್ ಮುಳ್ಳೇರಿಯ, ರಾಜು ಕಿದೂರು, ವರ್ಣ ಕಲಾವಿದ ವಿಶ್ವಾಸ್, ಬಾಸುಮ ಕೊಡಗು, ಸುಧೀಶ್ ಕಾಸರಗೋಡು, ಪ್ರಕಾಶ್ ಕುಂಬಳೆ, ಸಾತ್ವಿಕ್, ವಸಂತ ಮೂಡಂಬೈಲು, ಕೃಷ್ಣಪ್ಪ ಬಂಬಿಲ ಮೊದಲಾದ ಸಂಪನ್ಮೂಲ ವ್ಯಕ್ತಿಗಳು ಸೊಗಸಾದ ತರಗತಿಗಳನ್ನು ನಡೆಸಿದರು. 


ಸಮಾರೋಪ ಸಮಾರಂಭವನ್ನು  ಕಾಸರಗೋಡು ಜಿಲ್ಲಾ ನಿವೃತ್ತ ಶಿಕ್ಷಣ ಉಪ ನಿರ್ದೇಶಕ ಇಬ್ರಾಹಿಂ ಬಿ. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಸ್ತುತ ಶಾಲೆಯಿಂದ ಶಾಲೆಯಿಂದ ನಿವೃತ್ತರಾಗಲಿರುವ ಮುಖ್ಯೋಪಾಧ್ಯಾಯ ಮತ್ತು ಉತ್ತಮ ಅಧ್ಯಾಪಕ ಸಂಘಟಕ ಶಾಂಭಟ್.ಯು ಮತ್ತು ಎಸ್. ಎಸ್. ಕೆ ಯೋಜನಾಧಿಕಾರಿ ಆಗಸ್ಟಿನ್ ಬರ್ನಾಡ್, ಪಿ.ಎಚ್.ಡಿ. ಪದವಿ ಪಡೆದ ಅಧ್ಯಕ್ಷ ಯತೀಶ್ ಕುಮಾರ್ ರೈ, ಇಬ್ರಾಹಿಂ ಬಿ. ಅವರನ್ನು ಗೌರವಿಸಲಾಯಿತು. ಸಂಘಟನೆಯ ಉಪಾಧ್ಯಕ್ಷ ವಿಜಯಕುಮಾರ್ ಬಿ.ಸ್ವಾಗತಿಸಿ, ಕಾರ್ಯದರ್ಶಿ ಗೋಪಾಲ ಕಾಟುಕುಕ್ಕೆ ವಂದಿಸಿದರು. ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ ಕೊಡ್ಲಮೊಗರು, ಶಿವಪ್ರಸಾದ್ ರಾವ್ ಪೈವಳಿಕೆ, ಶಿವರಾಮ ಕಾಟುಕುಕ್ಕೆ, ಮೇಲ್ವಿನ್ ಪೆರ್ಮುದೆ, ರಾಜ ಕುಮಾರ್ ಕಾಟುಕುಕ್ಕೆ, ಉದಯ ಸಾರಂಗ್, ಪ್ರಮೀಳಾ ಟೀಚರ್, ಶಿವಪ್ರಸಾದ್ ಚೆರುಗೋಳಿ, ಪ್ರಸಾದ್ ಮುಗು ವಿವಿಧ ಜವಾಬ್ದಾರಿಗಳ ನಿರ್ವಹಣೆ ಮಾಡಿದ್ದರು. ರಂಗಕಲೆ ಮತ್ತು ಶಿಕ್ಷಣ ಕ್ಷೇತ್ರದ ಅಭಿಮಾನಿಗಳು ಮತ್ತು ಪ್ರೋತ್ಸಾಹಕರಾದ ಬೇಕಲ ಉಪಶೀಕ್ಷಣಾಧಿಕಾರಿ ಅರವಿಂದ, ನಿವೃತ್ತ ಮುಖ್ಯೋಪಾಧ್ಯಾಯ ಪ್ರಕಾಶ್ ಮಸ್ತರ್, ಧರ್ಮತಡ್ಕ ಶಾಲೆಯ ಪ್ರಾಂಶುಪಾಲ ರಾಮಚಂದ್ರ ಭಟ್, ಕಾಸರಗೋಡು ಉಪ ಶಿಕ್ಷಣಾಧಿಕಾರಿ ನಾರಾಯಣ ದೇಲಂಪಾಡಿ, ಉದಯಗಿರಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಧರ ಭಟ್, ಬಂಬ್ರಾಣ ಶಾಲೆಯ ಮುಖ್ಯೋಪಾದ್ಯಾಯ ಸತ್ಯಪ್ರಕಾಶ್, ರಾಜೇಶ್ ಉಬ್ರಂಗಳ, ಪಬ್ಲಿಕ್ ಪ್ರಾಸಿಕ್ಯೂಟರ್ ವಕೀಲ ಚಂದ್ರಮೋಹನ, ನಿವೃತ್ತ ಅಧ್ಯಾಪಕ ವೆಂಕಟರಮಣ ಎನ್, ಸುನಿಲ್ ಕುಮಾರ್ ಮಯ್ಯಳ, ಗುರುರಾಜ್ ಕೋಳ್ಯೂರು ಮೊದಲಾದವರು ತರಗತಿಯ ವಿವಿಧ ಸಂದರ್ಭಗಳಲ್ಲಿ ಭಾಗವಹಿಸಿ ಶುಭ ಹಾರೈಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries