HEALTH TIPS

ಭಾರತ ಇದೀಗ ವಿಶ್ವದ ಎರಡನೇ ದೊಡ್ಡ ಸೌರಶಕ್ತಿ ಮಾರುಕಟ್ಟೆಯಾಗಿ ದಾಪುಗಾಲು

 ನವದೆಹಲಿ: ಸೌರಶಕ್ತಿ ಮಾರುಕಟ್ಟೆ ವಿಚಾರದಲ್ಲಿ ಭಾರತವು ಇದೀಗ ಮಹತ್ವದ ದಾಪುಗಾಲು ಇಟ್ಟಿದ್ದು, ಇದೇ ವರ್ಷ ಭಾರತ ವಿಶ್ವದ ಎರಡನೇ ಅತಿದೊಡ್ಡ ಸೌರಶಕ್ತಿ ಮಾರುಕಟ್ಟೆಯಾಗಿ ಬೆಳೆದಿದೆ.

ಈ ವಿಷಯವನ್ನು ಇಂದು ಭಾರತೀಯ ರಾಷ್ಟ್ರೀಯ ಸೌರಶಕ್ತಿ ಒಕ್ಕೂಟ ((NSEFI) ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ. 


2012ರಿಂದ 2023ವರೆಗೆ ಅಂದರೆ 11 ವರ್ಷಗಳಲ್ಲಿ ಭಾರತವು ಕೇವಲ 50 ಗಿಗಾ ವ್ಯಾಟ್‌ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯ ಸಾಧಿಸಿತ್ತು. ಈ ಪ್ರಮಾಣ ಇದೀಗ ಅಂದರೆ 2026ಕ್ಕೆ 150 ಗಿಗಾ ವ್ಯಾಟ್‌ಗೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಸೋಲಾರ್ ಶಕ್ತಿ ಹೆಚ್ಚಿಸುವುದರಲ್ಲಿ ಭಾರತ ಕೇವಲ 14 ತಿಂಗಳಲ್ಲಿ 100 ಗಿಗಾ ವ್ಯಾಟ್ ಹೆಚ್ಚಳವನ್ನು ಇನ್ನೇನು ಕೆಲವೇ ತಿಂಗಳುಗಳಲ್ಲಿ ಸಾಧಿಸಲಿದೆ ಎಂದು ಓSಇಈI ಸಿಇಒ ಸುಬ್ರಹ್ಮಣ್ಯಂ ಪುಲಿಪಾಕ ತಿಳಿಸಿದ್ದಾರೆ.

2030ರ ವೇಳೆಗೆ ಪಳಿಯುಳಿಕೆಗಳ ಇಂಧನಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಿ ಸೋಲಾರ್ ಶಕ್ತಿಯ ಪ್ರಮಾಣವನ್ನು 300 ಗಿಗಾ ವ್ಯಾಟ್‌ನಿಂದ 500ಕ್ಕೆ ಹೆಚ್ಚಿಸುವ ಮಹತ್ವದ ಗುರಿ ಮುಂದಿದೆ ಎಂದು ತಿಳಿಸಿದ್ದಾರೆ.

ಸೋಲಾರ್ ಶಕ್ತಿಯಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಲು ಪಿಎಂ ಕುಸುಮ್ ಯೋಜನೆ 2.0, ಪಿಎಂ ಸೂರ್ಯ ಘರ್, ಹೊಸ ಸೌರಶಕ್ತಿ ನೀತಿಗಳು ಹಾಗೂ ನ್ಯಾಷನಲ್ ಹೈಡ್ರೋಜನ್ ಮಿಷನ್ ಕಾರಣವಾಗಿವೆ ಎಂದು ಪುಲಿಪಾಕ ಸುದ್ದಿಗೋಷ್ಠಿಯಲ್ಲಿ ಹೇಳಿದರು.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries