HEALTH TIPS

ಇರಾನ್‌ ಹೊಡೆದುರುಳಿಸಿದ ಅಮೆರಿಕದ ಯುದ್ಧ ವಿಮಾನದಲ್ಲಿದ್ದ ಸಿಬ್ಬಂದಿಗಾಗಿ ಮುಂದುವರಿದ ಶೋಧ

 ಟೆಹ್ರಾನ್ : ದಕ್ಷಿಣ ಇರಾನ್‍ನಲ್ಲಿ ಹೊಡೆದುರುಳಿಸಲಾದ ಅಮೆರಿಕದ ಎಫ್-15 ಯುದ್ಧವಿಮಾನದ ನಾಪತ್ತೆಯಾದ ಸಿಬ್ಬಂದಿಗಾಗಿ ಅಮೆರಿಕ ಮತ್ತು ಇರಾನ್‍ನ ಪಡೆಗಳು ಶೋಧ ಕಾರ್ಯ ಮುಂದುವರಿಸಿರುವುದಾಗಿ ವರದಿಯಾಗಿದೆ.


ಇರಾನ್ ಹೊಡೆದುರುಳಿಸಿದ್ದ ಯುದ್ಧ ವಿಮಾನದಲ್ಲಿದ್ದ ಪೈಲಟ್‍ನನ್ನು ಶುಕ್ರವಾರ ರಾತ್ರಿ ಅಮೆರಿಕದ ಪಡೆ ರಕ್ಷಿಸಿದ್ದು ಈತ ಈಗ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾನೆ.

ವಿಮಾನದಲ್ಲಿದ್ದ ಮತ್ತೊಬ್ಬ ಸಿಬ್ಬಂದಿ, ಶಸ್ತ್ರಾಸ್ತ್ರ ವ್ಯವಸ್ಥೆಗಳ ಅಧಿಕಾರಿಯ ಬಗ್ಗೆ ಇದುವರೆಗೆ ಸುಳಿವಿಲ್ಲ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಸಿಬ್ಬಂದಿಯನ್ನು ಪತ್ತೆಹಚ್ಚಲು ಇರಾನ್‍ನ ಭದ್ರತಾ ಪಡೆ ಶೋಧ ಕಾರ್ಯ ಮುಂದುವರಿಸಿದ್ದು ಈತನನ್ನು ಜೀವಂತ ಹಿಡಿದುಕೊಟ್ಟರೆ ನಗದು ಪುರಸ್ಕಾರ ನೀಡುವುದಾಗಿ ನಾಗರಿಕರಿಗೆ ತಿಳಿಸಿದೆ.

ಇರಾನ್‍ನೊಂದಿಗೆ ಯುದ್ಧ ನಡೆಯುತ್ತಿರುವುದರಿಂದ ಅಮೆರಿಕದ ಶೋಧ ಕಾರ್ಯಾಚರಣೆ ಅತ್ಯಂತ ಅಪಾಯಕಾರಿ ಸ್ವರೂಪದ್ದಾಗಿದೆ. ಇದು ಭೀಕರ ಮತ್ತು ಭಾರಿ ಅಪಾಯಕಾರಿ ಕಾರ್ಯಾಚರಣೆಯಾಗಿದೆ. ಒಂದು ವೇಳೆ ಸಿಬ್ಬಂದಿಯನ್ನು ಇರಾನ್ ಸೆರೆಹಿಡಿದರೆ ಅಮೆರಿಕಕ್ಕೆ ಮುಖಭಂಗವಾಗುತ್ತದೆ ಮತ್ತು ಅಮೆರಿಕದ ಮೇಲೆ ಒತ್ತಡ ಹೇರಲು ಇರಾನ್‍ಗೆ ಬಲವಾದ ಅವಕಾಶ ದೊರೆತಂತಾಗುತ್ತದೆ ಎಂದು ಅಮೆರಿಕ ಸೇನಾಪಡೆಯ ಮಾಜಿ ಕಮಾಂಡರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries