HEALTH TIPS

ಚುನಾವಣೆ : ಎಕೆಎಂ ಅಶ್ರಫ್ ಕಾರ್ನರ್ ಸಭೆಗಳಲ್ಲಿ, ಕೆ. ಸುರೇಂದ್ರನ್ ಮಂಗಲ್ಪಾಡಿ ಪಂ. ಪರ್ಯಟನೆ, ಕೆ.ಆರ್. ಜಯಾನಂದರಿಂದ ಗಣ್ಯ ವ್ಯಕ್ತಿಗಳ ಭೇಟಿ

ಮಂಜೇಶ್ವರ: ಮತದಾನದ ದಿನ ಸಮೀಪಿಸುತ್ತಿರುವಂತೆ ಮಂಜೇಶ್ವರ ಮಂಡಲದ ವಿವಿಧ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಭರದಿಂದ ಮುಂದುವರಿಯುತ್ತಿದೆ. ಯುಡಿಎಫ್‍ನ ಅಭ್ಯರ್ಥಿ ಎಕೆಎಂ ಅಶ್ರಫ್  ಮೊಗ್ರಾಲ್‍ನಲ್ಲಿ ಕಾರ್ಯಕರ್ತರ ಜೊತೆ ರ್ಯಾಲಿ ನಡೆಸಿ ಪ್ರಚಾರ ಕೈಗೊಂಡರು. ಮೀಂಜ ಪಂಚಾಯತಿಯ ಗಾಂಧಿನಗರದಲ್ಲಿ ಕುಟುಂಬ ಸಭೆಯಲ್ಲಿ ಭಾಗವಹಿಸಿದರು. ಶುಕ್ರವಾರ ಬೆಳಿಗ್ಗೆ ಕುಂಬಳೆ ಪಂಚಾಯತ್‍ನ ಮುಳಿಯಡ್ಕದಲ್ಲಿ ಕಾರ್ನರ್ ಸಭೆ, ಸಂಜೆ 4ಕ್ಕೆ ಆರಿಕ್ಕಾಡಿಯಲ್ಲಿ ಪರ್ಯಟನೆ ಕೊನೆಗೊಳ್ಳಲಿದೆ. 3 ಗಂಟೆಗೆ ಉಪ್ಪಳ ಬಪ್ಪಾಯಿತೊಟ್ಟಿಯಲ್ಲಿ ಕುಟುಂಬಸಭೆಯಲ್ಲಿ ನಡೆದಿದ್ದು, ಕರ್ನಾಟಕ ಸಚಿವ ಜಮೀರ್ ಅಹಮ್ಮದ್ ಉದ್ಘಾಟಿಸಿದರು. 


.........................................................

ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಮೀಂಜ ಪಂಚಾಯತ್‍ನಲ್ಲಿ ಪರ್ಯಟನೆ ನಡೆಸಿದರು. ಕುಟುಂಬ ಸಭೆ, ಉನ್ನತಿ, ತರವಾಡು ಮನೆ ಸಹಿತ ವಿವಿಧ ಕಡೆಗಳಲ್ಲಿ ಮತದಾರರನ್ನು ಭೇಟಿಯಾದರು. ಶುಕ್ರವಾರ ಬೆಳಿಗ್ಗೆ ಸೋಂಕಾಲ್ ಚುನಾವಣಾ ಕಚೇರಿಯಿಂದ ಪರ್ಯಟನೆ ಆರಂಭಿಸಿದ್ದು, ವಿವಿಧ ಕಡೆಗಳಲ್ಲಾಗಿ ಸಾಗಿ ರಾತ್ರಿ ಶಾರದಾನಗರ ಶಾರದಾ ಭಜನಾ ಮಂದಿರ, ಪ್ರತಾಪನಗರಗಳಲ್ಲಿ ಮತದಾರರನ್ನು ಭೇಟಿಯಾದರು.


.............................................................................................

ಎಡರಂಗ ಅಭ್ಯರ್ಥಿ ಕೆ.ಆರ್. ಜಯಾನಂದ ಹೊಸಂಗಡಿ ಪೇಟೆ ಸಹಿತ ವಿವಿಧ ಕಡೆಗಳಲ್ಲಿ ಮತದಾರರನ್ನು ಭೇಟಿಯಾಗಿ ಮತ ಯಾಚಿಸಿದರು.  ಮಧ್ಯಾಹ್ನ ವರೆಗೆ ಹೊಸಂಗಡಿ ಪೇಟೆಯಲ್ಲಿ ಸಂಚರಿಸಿದ ಇವರು ಅಪರಾಹ್ನ ವರ್ಕಾಡಿ, ಮೀಂಜ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ನರ್ ಸಭೆಗಳಲ್ಲಿ ಭಾಗವಹಿಸಿದರು. ಗಣ್ಯ ವ್ಯಕ್ತಿಗಳನ್ನು ಭೇಟಿಯಾದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries