HEALTH TIPS

ಬುಷೆಹರ್ ಪರಮಾಣು ಸ್ಥಾವರದ ಮೇಲಿನ ದಾಳಿಯಿಂದ ವಿಕಿರಣ ಸೋರಿಕೆಯ ಅಪಾಯ: ಇರಾನ್ ಎಚ್ಚರಿಕೆ

ಟೆಹರಾನ್: ಇರಾನ್‍ನ ಬುಷೆಹರ್ ಪರಮಾಣು ಸ್ಥಾವರದ ಮೇಲೆ 4ನೇ ಬಾರಿ ಅಮೆರಿಕ-ಇಸ್ರೇಲ್ ದಾಳಿಯ ನಂತರ ಪಶ್ಚಿಮ ಏಶ್ಯಾ ಪ್ರದೇಶದಲ್ಲಿ ವಿಕಿರಣಶೀಲ ದುರಂತದ ಸಾಧ್ಯತೆಯಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಭಾನುವಾರ ಎಚ್ಚರಿಕೆ ನೀಡಿದ್ದಾರೆ.

ಉಕ್ರೇನ್‍ನ ಝಪೋರಿಝಿಯಾ ವಿದ್ಯುತ್ ಸ್ಥಾವರದ ಬಳಿ ರಶ್ಯ ದಾಳಿ ನಡೆಸಿದ್ದಕ್ಕೆ ವ್ಯಕ್ತವಾಗಿದ್ದ ಆಕ್ರೋಶವನ್ನು `ಪಾಶ್ಚಿಮಾತ್ಯ ಬೂಟಾಟಿಕೆ' ಎಂದು ಉಲ್ಲೇಖಿಸಿದ ಅರಾಘ್ಚಿ, ಬುಷೆಹರ್ ಪರಮಾಣು ಸ್ಥಾವರದ ಮೇಲೆ 4 ಬಾರಿ ದಾಳಿ ನಡೆದಿದ್ದರೂ ಇವರು ಸುಮ್ಮನಿದ್ದಾರೆ ಎಂದು ಟೀಕಿಸಿದ್ದಾರೆ.

ಬುಷೆಹರ್ ಸ್ಥಾವರದ ಮೇಲೆ ಇಸ್ರೇಲ್-ಅಮೆರಿಕ ನಾಲ್ಕು ಬಾರಿ ಬಾಂಬ್ ಹಾಕಿವೆ. ವಿಕಿರಣಶೀಲ ಧೂಳಿನ ಮಳೆಯಿಂದ ಗಲ್ಫ್ ಸಹಕಾರ ಮಂಡಳಿಯ(ಜಿಸಿಸಿ) ರಾಜಧಾನಿಗಳಲ್ಲಿ ಸಾವು-ನೋವು ಸಂಭವಿಸುತ್ತವೆ. ಟೆಹ್ರಾನ್‍ನಲ್ಲಿ ಅಲ್ಲ ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬುಷೆಹರ್ ಪರಮಾಣು ಸ್ಥಾವರದ ಮೇಲಿನ ದಾಳಿಯಿಂದ ತೀವ್ರ ವಿಕಿರಣಶೀಲ ಮಾಲಿನ್ಯದ ಅಪಾಯದ ಬಗ್ಗೆ ಇರಾನ್ ವಿಶ್ವಸಂಸ್ಥೆಗೆ ಬರೆದಿರುವ ಪತ್ರದಲ್ಲಿ ಎಚ್ಚರಿಸಿದೆ. ಸಕ್ರಿಯ ಬುಷೆಹರ್ ಪರಮಾಣು ವಿದ್ಯುತ್ ಸ್ಥಾವರದ ವ್ಯಾಪ್ತಿಯಲ್ಲಿ ಪುನರಾವರ್ತಿತ ದಾಳಿಗಳು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದು ಸಂಪೂರ್ಣ ಪ್ರದೇಶವನ್ನು ಗಂಭೀರ ಮಾನವ ಮತ್ತು ಪರಿಸರ ಪರಿಣಾಮಗಳೊಂದಿಗೆ ವಿಕಿರಣಶೀಲ ಮಾಲಿನ್ಯದ ಗಂಭೀರ ಅಪಾಯಕ್ಕೆ ಒಡ್ಡುತ್ತದೆ' ಎಂದು ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ವಿಶ್ವಸಂಸ್ಥೆಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವರದಿಯಾದ ಘಟನೆಯ ಬಗ್ಗೆ ಐಎಇಎ(ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ) ನಿರ್ದೇಶಕ ರಾಫೆಲ್ ಗ್ರೊಸ್ಸಿ ತೀವ್ರ ಕಳವಳ ವ್ಯಕ್ತಪಡಿಸಿದ್ದು ಪರಮಾಣು ಸ್ಥಾವರಗಳು ಮತ್ತು ಸಮೀಪದ ಪ್ರದೇಶಗಳ ಮೇಲೆ ಯಾವತ್ತೂ ದಾಳಿ ನಡೆಯಬಾರದು ಎಂದು ಹೇಳಿರುವುದಾಗಿ ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries