ಕೊಲ್ಲಂ: ರಾಜ್ಯದಲ್ಲಿ 140 ಕಿ.ಮೀ ದೂರದವರೆಗೆ ಖಾಸಗಿ ಬಸ್‍ಗಳು ಸಂಚಾರಕ್ಕೆ ಅವಕಾಶವಿದೆ. ಕೊಲ್ಲಂ - ಕುಮಿಲೀ, ಎರ್ನಾಕುಲಂ - ಕುಮಿಳಿ, ಕೊಟ್ಟಾಯಂ - ಕುಮಿಳಿ, ಕೋಯಿಕ್ಕೋಡ್ - ಎರ್ನಾಕುಳಂ ಮಾರ್ಗಗಳಲ್ಲಿ ಖಾಸಗಿ ಬಸ್‍ಗಳ ಸಂಚಾರಕ್ಕೆ ಪರವಾನಗಿ ನವೀಕರಿಸಲಾಗಿದೆ.
ದೀರ್ಘ ದೂರ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ 241 ಖಾಸಗಿ ಬಸ್‍ಗಳ ಸಂಚಾರಕ್ಕೆ ಅನುಮತಿ ವಿಳಂಬವಿಲ್ಲದೆ ನವೀಕರಿಸಲಾಗುವುದು ಎಂಬ ವರದಿಗಳಿವೆ. ಈ ಹಿಂದೆ, ಖಾಸಗಿ ಬಸ್‍ಗಳು 140 ಕಿ.ಮೀ ಮೀರಿ ಸಂಚರಿಸಲು ಅವಕಾಶವಿರಲಿಲ್ಲ.
ಈ ನಿಯಮವನ್ನು ಹೈಕೋರ್ಟ್ ರದ್ದುಗೊಳಿಸಿತು. ಹಲವಾರು ತಿಂಗಳುಗಳ ನಂತರ, ಮೋಟಾರು ವಾಹನ ಇಲಾಖೆಯು ಅಸ್ತಿತ್ವದಲ್ಲಿರುವ ಪರವಾನಗಿಗಳನ್ನು ನವೀಕರಿಸಲು ಮತ್ತು ದೀರ್ಘ ದೂರ ಮಾರ್ಗಗಳಲ್ಲಿ ಹೊಸ ಪರವಾನಗಿಗಳನ್ನು ನೀಡಲು ನಿರ್ಧರಿಸಿದೆ.
ಕಾಸರಗೋಡು-ಮಂಗಳೂರು ಹೆದ್ದಾರಿಯಲ್ಲಿ ಮುಂದಿನ ದಿನಗಳಲ್ಲಿ ಖಾಸಗೀ ಬಸ್ ಸಂಚಾರ ಆರಂಭಗೊಳ್ಳುವುದೇ, ರಾ.ಹೆದ್ದಾರಿಗೆ ಈ ನಿಯಮ ಅನ್ವಯವೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

