HEALTH TIPS

ಭಾರತ-ದಕ್ಷಿಣ ಕೊರಿಯಾ ಒಪ್ಪಂದ: ಮೋದಿ-ಮ್ಯುಂಗ್ ಮಾತುಕತೆಯ ಮುಖ್ಯಾಂಶಗಳು ಇಲ್ಲಿವೆ

 ವದೆಹಲಿ: ಭಾರತ ಮತ್ತು ದಕ್ಷಿಣ ಕೊರಿಯಾ ನಡುವಿನ ಆರ್ಥಿಕ ಸಂಬಂಧವನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರು ಮಹತ್ವದ ಚರ್ಚೆ ನಡೆಸಿದ್ದಾರೆ. 


ಸೋಮವಾರ ನಡೆದ ಮಾತುಕತೆಯಲ್ಲಿ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು 2030ರ ವೇಳೆಗೆ ₹4.6 ಲಕ್ಷ ಕೋಟಿ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ತಿಳಿದು ಬಂದಿದೆ.

ಮಾತುಕತೆಯ ಮುಖ್ಯಾಂಶಗಳು

*2009ರಲ್ಲಿ ಮಾಡಿಕೊಳ್ಳಲಾಗಿದ್ದ 'ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ'ವನ್ನು ಮುಂಬರುವ ಒಂದು ವರ್ಷದೊಳಗೆ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ.

*ಆರ್ಥಿಕ ಹರಿವನ್ನು ಸುಗಮಗೊಳಿಸಲು 'ಇಂಡಿಯಾ-ಕೊರಿಯಾ ಫೈನಾನ್ಶಿಯಲ್ ಫೋರಮ್' ಮತ್ತು ವ್ಯವಹಾರ ಸಹಕಾರಕ್ಕಾಗಿ 'ಕೈಗಾರಿಕಾ ಸಹಕಾರ ಸಮಿತಿಯನ್ನು ರಚಿಸಲಾಗಿದೆ.

*ಪೂರೈಕೆ ಸರಪಳಿ ಮತ್ತು ನಿರ್ಣಾಯಕ ತಂತ್ರಜ್ಞಾನಗಳ ರಕ್ಷಣೆಗಾಗಿ ಆರ್ಥಿಕ ಭದ್ರತಾ ಸಂವಾದವನ್ನು ಪ್ರಾರಂಭಿಸಲು ಉಭಯ ದೇಶಗಳು ಸಮ್ಮತಿಸಿವೆ.

*ಸಾಗರ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಹಡಗು ನಿರ್ಮಾಣ, ಶಿಪ್ಪಿಂಗ್ ಮತ್ತು ಕಡಲ ಲಾಜಿಸ್ಟಿಕ್ಸ್ ಕುರಿತು ಸಮಗ್ರ ಚೌಕಟ್ಟನ್ನು ಬಿಡುಗಡೆ ಮಾಡಲಾಯಿತು. ಪ್ರಸ್ತುತ ₹25 ಲಕ್ಷ ಕೋಟಿ ಇರುವ ದ್ವಿಪಕ್ಷೀಯ ವ್ಯಾಪಾರವನ್ನು ಮುಂದಿನ ಆರು ವರ್ಷಗಳಲ್ಲಿ ದ್ವಿಗುಣಗೊಳಿಸುವ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ.

* ಕೊರಿಯಾದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳನ್ನು ಭಾರತಕ್ಕೆ ಆಕರ್ಷಿಸಲು ವಿಶೇಷವಾದ 'ಕೊರಿಯನ್ ಇಂಡಸ್ಟ್ರಿಯಲ್ ಟೌನ್‌ಶಿಪ್' ಸ್ಥಾಪಿಸಲಾಗುವುದು.

ನರೇಂದ್ರ ಮೋದಿ, ಭಾರತದ ಪ್ರಧಾನ ಮಂತ್ರಿಕೊರಿಯನ್ ಕಂಪನಿಗಳು ಭಾರತದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ನಮ್ಮ ಆರ್ಥಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ವ್ಯಾಪಾರ ಒಪ್ಪಂದಗಳನ್ನು ನವೀಕರಿಸುತ್ತಿದ್ದೇವೆ

ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರ ಚೊಚ್ಚಲ ಭಾರತ ಭೇಟಿ ಇದಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries