HEALTH TIPS

ಬೀಡಿ ಉದ್ಯಮ ನಾಶ ಮಾಡಿದ್ದೆ ಕೇರಳ ಎಡರಂಗ ಸರ್ಕಾರ -ಕೆ ಸುರೇಂದ್ರನ್

ಮಂಜೇಶ್ವರ: ಆರ್ಥಿಕತೆ ಅತ್ಯಂತ ಹಿಂದುಳಿದ ಪ್ರದೇಶವಾದ ಮಂಜೇಶ್ವರ ದಲ್ಲಿ ಒಂದು ಕಾಲದಲ್ಲಿ ಬೀಡಿ ಉದ್ಯಮ, ಬೀಡಿ ಕಟ್ಟುವುದು ನೂರಾರು ಕುಟುಂಬ ಗಳಿಗೆ ಪ್ರಮುಖವಾಗಿ ತಾಯಂದಿರಿಗೆ ಆರ್ಥಿಕತೆ ಸಬಳತೆಯನ್ನು ನೀಡಿದ ಗ್ರಾಮೀಣ ಉದ್ಯಮವಾಗಿತ್ತು. ಆದರೆ ಕಾರ್ಮಿಕರ ಪಕ್ಷ ಎಂದು ಹೇಳುವ ಕಮ್ಯುನಿಸ್ಟ್ ರ ಆಡಳಿತ ಇರುವ ನಾಡಿನಲ್ಲಿ ಉದ್ಯಮ ಮತ್ತು ಉದ್ಯೋಗ ಗುಡಿ ಕೈಗಾರಿಕೆ ಕಮ್ಯುನಿಸ್ಟ್ ರ ಗೊತ್ತು ಗುರಿ ಇಲ್ಲದ ಆಡಳಿತದಿಂದ ನಾಶವಾಗಿದೆ.


ಕುಟುಂಬಗಳ ಆಧಾರ ಸ್ಥಂಭವಾಗಿದ್ದ ಬೀಡಿ ಉದ್ಯಮವನ್ನು, ಬೀಡಿ ಸೊಸೈಟಿಗಳನ್ನು ಬೀಡಿ ತಯಾರಿಕೆ ಮಾಡದೇ ಸೊಸೈಟಿ ಹೆಸರಿಟ್ಟು ದಿನೇಶ್ ಬ್ರಾಂಡ್ ಬದಲಾಯಿಸಿ ಇತರ ಉತ್ಪನ್ನಗಳನ್ನು ಸ್ಥಾಪಿಸುವ ನಾಟಕವಾಡಿ ಈಗ ದಿನೇಶ್ ಉದ್ಯಮ ಕೆಲವು ಬಂಡವಾಳ ಶಾಹಿ ಕಮ್ಯುನಿಸ್ಟ್ ನೇತಾರರ ದಂದೆ ಮಾಡುವ ಸಂಸ್ಥೆಯಾಗಿ ಬದಲಾಗಿದೆ ಎಂದು ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್ ಆರೋಪಿಸಿದರು.

ಬೀಡಿ ಕಾರ್ಮಿಕರಿಗೆ ರಾಜ್ಯ ಸರಕಾರ ಕ್ಷೇಮ ಭತ್ಯೆಯನ್ನು ಸರಿಯಾಗಿ ವಿತರಣೆ ಮಾಡುತ್ತಿಲ್ಲ. ಮಾತ್ರವಲ್ಲ. ವಿಧವಾ ವೇತನ, ವೃಧಪ್ಯ ವೇತನ ಪಡೆಯುವವರಿಗೆ ಕ್ಷೇಮ ಭತ್ಯೆ ತಡೆ ಹಿಡುಯುವ ಪ್ರಯತ್ನ ಎಡರಂಗ ಮಾಡುತ್ತಿದೆ ಎಂದು ಸುರೇಂದ್ರನ್ ಹೇಳಿದರು.

ಮಂಜೇಶ್ವರ ಪಂಚಾಯತಿ ಮಜಲು ಎಂಬಲ್ಲಿ ಬಿಜೆಪಿ ಸಂಘಟನಾತ್ಮಕ ಚಟುವಟಿಕೆ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ನೇತಾರರಾದ ಯಾದವ ಬಡಾಜೆ, ರಾಜೇಶ್ ತೂಮಿನಾಡ್, ರಾಜೇಶ್ ಮಜಲು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries