HEALTH TIPS

ಭಾರತಕ್ಕೆ ಬರುತ್ತಿದ್ದ ತೈಲ ಟ್ಯಾಂಕರ್ ಚೀನಾಕ್ಕೆ ಪ್ರಯಾಣಿಸಿಲ್ಲ: ಸಚಿವಾಲಯ

 ನವದೆಹಲಿ: ಇರಾನ್‌ನ ಕಚ್ಚಾ ತೈಲವನ್ನು ತುಂಬಿಕೊಂಡು ಭಾರತಕ್ಕೆ ಬರುತ್ತಿದ್ದ ತೈಲ ಟ್ಯಾಂಕರ್, ಹಣ ಪಾವತಿಯಲ್ಲಿನ ವ್ಯತ್ಯಯದ ಕಾರಣಕ್ಕೆ ಚೀನಾದ ಕಡೆಗೆ ತೆರಳಿದೆ ಎಂಬ ಮಾಧ್ಯಮಗಳ ವರದಿಗಳನ್ನು ಪೆಟ್ರೋಲಿಯಂ ಸಚಿವಾಲಯ ನಿರಾಕರಿಸಿದೆ. 


6 ಲಕ್ಷ ಬ್ಯಾರಲ್ ಕಚ್ಚಾ ತೈಲವಿದ್ದ ಪಿಂಗ್‌ ಶುನ್ ಟ್ಯಾಂಕರ್ ಖಾರ್ಗ್‌ ದ್ವೀಪದಿಂದ ಮಾರ್ಚ್‌ 4ರಂದು ಹೊರಟಿತ್ತು. ಏಪ್ರಿಲ್ 4ರಂದು ಗುಜರಾತ್‌ನ ವಾಡಿನಾರ್‌ ಬಂದರಿಗೆ ಬರಬೇಕಾಗಿತ್ತು. ಆದರೆ, ಹಣ ಪಾವತಿ ವ್ಯತ್ಯಯದ ಕಾರಣಕ್ಕೆ ಟ್ಯಾಂಕರ್ ಚೀನಾದತ್ತ ತೆರಳಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದರ ಬೆನ್ನಲ್ಲೇ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.

ಪೆಟ್ರೋಲಿಯಂ ಸಚಿವಾಲಯ ಹೇಳಿದ್ದೇನು?

ಭಾರತಕ್ಕೆ ಕಚ್ಚಾ ತೈಲ ಮತ್ತು ಎಲ್‌ಪಿಜಿ ಆಮದು ಕುರಿತಂತೆ ಪೆಟ್ರೋಲಿಯಂ ಸಚಿವಾಲಯವು 'ಎಕ್ಸ್‌'ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, 'ಕಚ್ಚಾ ತೈಲ ಆಮದು ಮಾಡಿಕೊಳ್ಳುವಲ್ಲಿ ಭಾರತವು ಯಾವುದೇ ಹಣ ಪಾವತಿ ಅಡೆತಡೆಗಳನ್ನು ಎದುರಿಸುತ್ತಿಲ್ಲ. ಭಾರತವು 40ಕ್ಕೂ ಹೆಚ್ಚು ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ವಾಣಿಜ್ಯಿಕ ಅಂಶಗಳನ್ನು ಪರಿಗಣಿಸಿ ವಿವಿಧ ಮೂಲಗಳಿಂದ ತೈಲವನ್ನು ಪಡೆಯಲು ಕಂಪನಿಗಳಿಗೆ ಪೂರ್ಣ ಸ್ವಾತಂತ್ರ್ಯವಿದೆ' ಎಂದು ಸ್ಪಷ್ಟಪಡಿಸಿದೆ.

'ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗಿರುವ ಪೂರೈಕೆ ವ್ಯತ್ಯಯದ ನಡುವೆಯೂ, ಭಾರತೀಯ ತೈಲ ಘಟಕಗಳು ಇರಾನ್ ಸೇರಿದಂತೆ ಇತರ ಮೂಲಗಳಿಂದ ಕಚ್ಚಾ ತೈಲವನ್ನು ಸುಗಮವಾಗಿ ಅಮದು ಮಾಡಿಕೊಳ್ಳುತ್ತಿವೆ. ಪ್ರಸ್ತುತ ಹರಿದಾಡುತ್ತಿರುವ ವದಂತಿಗಳಿಗೆ ವ್ಯತಿರಿಕ್ತವಾಗಿದ್ದು, ಇರಾನ್‌ನ ಕಚ್ಚಾ ತೈಲ ಆಮದಿಗೆ ಯಾವುದೇ ಹಣ ಪಾವತಿ ಅಡೆತಡೆ ಆಗಿಲ್ಲ' ಎಂದು ತಿಳಿಸಿದೆ.

'ತೈಲ ವ್ಯಾಪಾರ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೆ ಈ ಆರೋಪಗಳನ್ನು ಮಾಡಲಾಗುತ್ತಿದೆ. ಸಮುದ್ರ ಮಾರ್ಗದಲ್ಲಿರುವ ಸರಕುಗಳು ವ್ಯಾಪಾರ ಲಾಭ ಅಥವಾ ಕಾರ್ಯಾಚರಣೆಯ ಅನುಕೂಲಕ್ಕೆ ತಕ್ಕಂತೆ ಪ್ರಯಾಣದ ಮಧ್ಯದಲ್ಲೇ ತಮ್ಮ ಗಮ್ಯಸ್ಥಾನವನ್ನು ಬದಲಾಯಿಸಿಕೊಳ್ಳುವ ಸಾಧ್ಯತೆ ಇರುತ್ತದೆ' ಎಂದೂ ಪೆಟ್ರೋಲಿಯಂ ಸಚಿವಾಲಯ ಹೇಳಿದೆ.

ಎಲ್‌ಪಿಜಿ ಬಗ್ಗೆ ಹರಡುತ್ತಿರುವ ವದಂತಿಗಳೂ ಸುಳ್ಳು. ಸುಮಾರು 44 ಟಿಎಂಟಿ ಇರಾನ್ ಎಲ್‌ಪಿಜಿ ಹೊತ್ತ 'ಸೀ ಬರ್ಡ್' ನೌಕೆಯು ಏಪ್ರಿಲ್ 2ರಂದು ಮಂಗಳೂರು ಬಂದರು ತಲುಪಿದ್ದು, ಪ್ರಸ್ತುತ ಅನಿಲ ಇಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವಾಲಯ ದೃಢಪಡಿಸಿದೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries