ನವದೆಹಲಿ: ವಂದೇ ಭಾರತ್ ಸ್ಲೀಪರ್ ರೈಲಿನ ಮಾದರಿಯನ್ನು ಈ ವರ್ಷದ ಅಂತ್ಯದ ಒಳಗೆ ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು.
ಸ್ಲೀಪರ್ ರೈಲಿನ ಮಾದರಿಯನ್ನು ರೈಲು ವಿಕಾಸ ನಿಗಮ ಲಿಮಿಟೆಡ್ ನೇತೃತ್ವದ ಜಂಟಿ ಸಂಸ್ಥೆಗಳು ನಿರ್ಮಿಸಿದ್ದು, ವರ್ಷದೊಳಗಾಗಿ ಇದು ಪರೀಕ್ಷಾರ್ಥ ಸಂಚಾರಕ್ಕೆ ಲಭ್ಯವಾಗಲಿದೆ ಎಂದು ರೈಲ್ವೆ ಮಂಡಳಿಯ ಮುಖ್ಯಸ್ಥ ಸತೀಶ್ ಕುಮಾರ್ ಅವರು ಹೇಳಿದರು.
ರೈಲು ವಿಕಾಸ ನಿಗಮ ಲಿಮಿಟೆಡ್‌ನ 21ನೇ ವಾರ್ಷಿಕ ದಿನಾಚರಣೆಯಲ್ಲಿ ಮಾತನಾಡಿದ ಅವರು, 'ರೈಲ್ವೆ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ನವರತ್ನ ಸಾರ್ವಜನಿಕ ಸಂಸ್ಥೆಯು ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ನಿರ್ಮಿಸಲಿದೆ' ಎಂದು ತಿಳಿಸಿದರು.
'ಪರೀಕ್ಷಾರ್ಥ ಸಂಚಾರದ ಬಳಿಕ 120 ರೈಲುಗಳನ್ನು ಸಂಸ್ಥೆ ಪೂರೈಸಲಿದೆ' ಎಂದು ಹೇಳಿದರು.

