HEALTH TIPS

ಕದನ ವಿರಾಮದ ನಂತರ ಹಾರ್ಮುಜ್ ದಾಟಿದ ಎಲ್‌ಪಿಜಿ ಹೊತ್ತ ಭಾರತದ ಹಡಗು

ನವದಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ದ್ರವೀಕೃತ ಪೆಟ್ರೋಲಿಯಂ ಅನಿಲ(ಎಲ್‌ಪಿಜಿ) ಹೊತ್ತ ಮತ್ತೊಂದು ಭಾರತದ ಹಡಗು, ಜಗ್ ವಿಕ್ರಮ್, ಹಾರ್ಮುಜ್ ಜಲಸಂಧಿಯನ್ನು ದಾಟಿದೆ. 

ಇದು ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಿದ ನಂತರ ಹಾರ್ಮುಜ್ ದಾಟಿದ ಮೊದಲ ಭಾರತೀಯ ಹಡಗು ಎಂದು ಹಡಗು-ಟ್ರ್ಯಾಕಿಂಗ್ ದತ್ತಾಂಶಗಳು ತಿಳಿಸಿವೆ.

ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಗ್ಗೆ ನಡುವೆ ಎಲ್ ಪಿಜೆ ಹೊತ್ತ ಭಾರತದ ಕಾರ್ಯತಂತ್ರದ ಜಲಮಾರ್ಗದ ಮೂಲಕ ಚಲಿಸಿತು ಮತ್ತು ಶನಿವಾರ ಮಧ್ಯಾಹ್ನ ಜಲಸಂಧಿಯ ಪೂರ್ವಕ್ಕೆ ಓಮನ್ ಕೊಲ್ಲಿಯಲ್ಲಿದ್ದು, ಪೂರ್ವಕ್ಕೆ ಸಾಗುತ್ತಿದೆ.

ಮಾರ್ಚ್ ಆರಂಭದಿಂದ ಪರ್ಷಿಯನ್ ಕೊಲ್ಲಿಯನ್ನು ತೊರೆದ ಒಂಬತ್ತನೇ ಭಾರತೀಯ ಹಡಗು ಜಗ್ ವಿಕ್ರಮ್ ಆಗಿದ್ದು, ಭಾರತ ಧ್ವಜ ಹೊತ್ತ ಸುಮಾರು 15 ಹಡಗುಗಳು ಈ ಪ್ರದೇಶದಲ್ಲಿ ಇನ್ನೂ ಸಾಗಣೆಗಾಗಿ ಕಾಯುತ್ತಿವೆ.

ಮುಂಬೈ ಮೂಲದ ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಕಂಪನಿ ಒಡೆತನದ ಜಗ್ ವಿಕ್ರಮ್, 26,000 ಟನ್‌ಗಳಿಗಿಂತ ಹೆಚ್ಚು ತೂಕದ ಸಾಮರ್ಥ್ಯವನ್ನು ಹೊಂದಿರುವ ಮಧ್ಯಮ ಗಾತ್ರದ ಅನಿಲ ವಾಹಕವಾಗಿದೆ.

ಇದು ಸುಮಾರು 20,000 ಟನ್ ಎಲ್‌ಪಿಜಿಯನ್ನು ಸಾಗಿಸುತ್ತಿರಬಹುದು ಎಂದು ವ್ಯಾಪಾರಿ ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries