ಇಸ್ಲಮಾಬಾದ್: ತನ್ನ ವಾಯು ಪ್ರದೇಶವನ್ನು ಬಳಸುವುದಕ್ಕೆ ಭಾರತದ ವಿಮಾನಗಳಿಗೆ ವಿಧಿಸಿರುವ ನಿರ್ಬಂಧದ ಅವಧಿಯನ್ನು ಪಾಕಿಸ್ತಾನವು ಮೇ 24ರವರೆಗೆ ವಿಸ್ತರಿಸಿದೆ.
ಪೆಹಲ್ಗಾಮ್ನಲ್ಲಿನ ಭಯೋತ್ಪಾದಕರ ದಾಳಿಯ ಬಳಿಕ 2025ರ ಏಪ್ರಿಲ್ 24ರಿಂದ ಪಾಕಿಸ್ತಾನ ಈ ನಿಷೇಧ ಹೇರಿದೆ.
ಈ ನಿರ್ಧಾರದಿಂದಾಗಿ ಭಾರತ ವಿಮಾನಯಾನ ಸಂಸ್ಥೆಗಳಿಗೆ ಕೋಟಿಗಟ್ಟಲೆ ನಷ್ಟವಾಗಿದೆ. ಭಾರತದ ವಾಯುಪಡೆಯ ವಿಮಾನಗಳು ಕೂಡ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲು ಅನುಮತಿ ನೀಡಲಾಗಿಲ್ಲ.

