HEALTH TIPS

ಅಮೆರಿಕ-ಇರಾನ್ ಕದನ ವಿರಾಮ ವಿಸ್ತರಣೆ: ಟ್ರಂಪ್‌ಗೆ ಪಾಕ್ ಪ್ರಧಾನಿ ಷರೀಫ್ ಧನ್ಯವಾದ

 ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸ್ವಾಗತಿಸಿದ್ದಾರೆ. ಈ ಕ್ರಮವು ಸಂಪೂರ್ಣ ಶಾಂತಿ ಒಪ್ಪಂದಕ್ಕೆ ದಾರಿ ಮಾಡಿಕೊಡಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. 


ಇಂದಿಗೆ (ಏಪ್ರಿಲ್ 22) ಮುಕ್ತಾಯಗೊಳ್ಳಬೇಕಿದ್ದ ಕದನ ವಿರಾಮವನ್ನು, ಪಾಕಿಸ್ತಾನದ ನಾಯಕತ್ವದ ವಿಶೇಷ ವಿನಂತಿಯ ಮೇರೆಗೆ ಅಧ್ಯಕ್ಷ ಟ್ರಂಪ್ ವಿಸ್ತರಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪ್ರಧಾನಿ ಷರೀಫ್, 'ನನ್ನ ಮತ್ತು ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ ಪರವಾಗಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಅವಕಾಶ ನೀಡಲು ನಮ್ಮ ವಿನಂತಿಯನ್ನು ಪುರಸ್ಕರಿಸಿದ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

'ಬ್ಲ್ಯಾಕ್‌ ಸ್ಪಾಟ್' ನಿರ್ಮೂಲನೆಗೆ ಪೊಮ್ಮಲ ಸುನೀಲ್‌ಕುಮಾರ್‌ ಸೂಚನೆವಿದೇಶಿ ಶೈಲಿಯಲ್ಲಿ ಪ್ರೇಮ ನಿವೇದನೆ: ಕೈ-ಕಾಲು ಕಟ್ಟಿ ಪ್ರಿಯಕರನ ಸುಟ್ಟಳು...

ಟ್ರಂಪ್‌ ಅವರು 'ಟ್ರುತ್ ಸೋಷಿಯಲ್' ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, 'ಇರಾನ್ ಸರ್ಕಾರವು ಪ್ರಸ್ತುತ ಆಂತರಿಕವಾಗಿ ವಿಭಜನೆಯಾಗಿದೆ. ಪಾಕಿಸ್ತಾನದ ಪ್ರಧಾನಿ ಮತ್ತು ಫೀಲ್ಡ್ ಮಾರ್ಷಲ್ ಮನೀರ್ ಅವರ ಕೋರಿಕೆಯ ಮೇರೆಗೆ, ಇರಾನ್ ನಾಯಕರು ಒಂದು ಏಕೀಕೃತ ಪ್ರಸ್ತಾವನೆಯೊಂದಿಗೆ ಬರುವವರೆಗೆ ನಾವು ದಾಳಿಯನ್ನು ತಡೆಹಿಡಿಯುತ್ತಿದ್ದೇವೆ. ಅಲ್ಲಿಯವರೆಗೆ ಮಿಲಿಟರಿ ದಿಗ್ಬಂಧನ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲ್ ಜಂಟಿ ದಾಳಿಯೊಂದಿಗೆ ಆರಂಭವಾದ ಈ ಸಂಘರ್ಷವನ್ನು ಅಂತ್ಯಗೊಳಿಸಲು ಪಾಕಿಸ್ತಾನವು ಮಧ್ಯಸ್ಥಿಕೆ ವಹಿಸುತ್ತಿದೆ.

ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಎರಡನೇ ಸುತ್ತಿನ ಮಾತುಕತೆಗಾಗಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಅವರ ಭೇಟಿಯನ್ನು ಸದ್ಯಕ್ಕೆ ಮುಂದೂಡಲಾಗಿದೆ.

ಇರಾನ್ ಜೊತೆಗಿನ ಯುದ್ಧ ವಿರಾಮ ಅನಿರ್ದಿಷ್ಟಾವಧಿಗೆ ವಿಸ್ತರಣೆ: ಟ್ರಂ‍ಪ್‍ಗಿIಆಇಔ | ಕ್ಷೇತ್ರ ಮರುವಿಂಗಡಣೆ: ಕರ್ನಾಟಕಕ್ಕೆ ಲಾಭವೇ ನಷ್ಟವೇ?

ಮುಂದಿನ ಮಾತುಕತೆಗಾಗಿ ಪಾಕಿಸ್ತಾನವು ಈಗಾಗಲೇ 10,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ವ್ಯಾಪಕ ಸಿದ್ಧತೆ ಮಾಡಿಕೊಂಡಿದೆ.

ಏಪ್ರಿಲ್ 11 ಮತ್ತು 12 ರಂದು ನಡೆದ ಮೊದಲ ಸುತ್ತಿನ ಮಾತುಕತೆಗಳು ಯಾವುದೇ ನಿರ್ಣಾಯಕ ಫಲಿತಾಂಶ ನೀಡಲಿಲ್ಲ. ಈಗ ವಿಸ್ತರಿಸಲಾದ ಕದನ ವಿರಾಮವು ಉಭಯ ದೇಶಗಳ ನಡುವೆ ಶಾಶ್ವತ ಶಾಂತಿ ಒಪ್ಪಂದಕ್ಕೆ ಸಹಕಾರಿಯಾಗಲಿ ಎಂದು ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ಡಾರ್ ಸೇರಿದಂತೆ ಹಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries