ಕಾಸರಗೋಡು: ತೃಕ್ಕರಿಪುರ ವಿಧಾನಸಭಾ ಕ್ಷೇತ್ರದ ಪ್ರಿಸೈಡಿಂಗ್ ಆಫೀಸರ್ ಅವರ ಅಧಿಕೃತ ಲ್ಯಾಪ್ ಟಾಪ್ ಸಹಿತ ದಾಖಲೆಪತ್ರಗಳಿದ್ದ ಬ್ಯಾಗ್ ರೈಲು ಪ್ರಯಾಣ ವೇಳೆ ಕಳವಾಗಿರುವ ಬಗ್ಗೆ ಕೋಯಿಕ್ಕೋಡ್ ರೈಲ್ವೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ಜಿಲ್ಲಾ ಮೃಗಸಂರಕ್ಷಣಾ ಇಲಾಖೆ ಅಧಿಕಾರಿ ಪತ್ತನಂತಿಟ್ಟ ಕೈಪತ್ತೂರು ತುಮಲೇತ್ ನಿವಾಸಿ ಜೋನ್ ಸಿ ಜೋಯ್ ಬ್ಯಾಗ್ ಕಳೆದುಕೊಂಡವರು.
ಜೋನ್ ಸಿ ಜೋಯ್ ಅವರು ಕಾಯಂಕುಳದಿಂದ ಕಾಸರಗೋಡಿಗೆ ಆಗಮಿಸಲು ಮಾವೇಲಿ ಎಕ್ಸ್ಪ್ರೆಸ್ನ ಎಸ್-6 ಕೋಚ್ನಲ್ಲಿ 61ನೇ ನಂಬ್ರ ಬರ್ತ್ನ ಪ್ರಯಾಣಿಸುತ್ತಿದ್ದ ಸಂದರ್ಭ ಸೋಮವಾರ ಬೆಳಗ್ಗೆ ಕೊಯಿಲಾಂಡಿ ಸಮೀಪಕ್ಕೆ ತಲುಪಿದಾಗ ಬರ್ತ್ನಲ್ಲಿ ಇರಿಸಿದ್ದ ಬ್ಯಾಗ್ ಕಳವಾಗಿರುವ ಬಗ್ಗೆ ಅರಿವಿಗೆ ಬಂದಿದ್ದು, ತಕ್ಷಣ ಕೋಯಿಕ್ಕೋಡ್ ರೈಲ್ವೇ ಪೆÇಲೀಸರಿಗೆ ದೂರು ನೀಡಿದ್ದರು. ಬ್ಯಾಗ್ನೊಳಗೆ ಲ್ಯಾಪ್ಟಾಪ್, ಆಧಾರ್ ಕಾರ್ಡ್, ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸನ್ಸ್, 2000 ರೂಪಾಯಿ, ಚುನಾವಣಾ ಅಧಿಕಾರಿಗಳ ಕೈಪಿಡಿ, ಪೆÇೀಸ್ಟಿಂಗ್ ಆರ್ಡರ್, ಬಟ್ಟೆಬರೆ, ಚಾರ್ಜರ್, ಪವರ್ ಬ್ಯಾಂಕ್, ಹೆಡ್ ಪೋನ್ ಮೊದಲಾದ ವಸ್ತುಗಳು ಒಳಗೊಂಡಿತ್ತು. ರೈಲ್ವೇ ಪೋಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

