HEALTH TIPS

ತಮಿಳುನಾಡಿನಲ್ಲಿ ಅಧಿಕಾರ ಯಾರಿಗೆ? ಡಿಎಂಕೆ, ಎನ್‌ಡಿಎ ಅಥವಾ ಟಿವಿಕೆ? ಸಮೀಕ್ಷೆಗಳಲ್ಲಿ ಹೊರಬಿತ್ತು ಅಚ್ಚರಿಯ ಮಾಹಿತಿ!

 ಚೆನ್ನೈ: ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆ ತೀವ್ರ ಕುತೂಹಲ ಮೂಡಿಸಿದ್ದು, ಡಿಎಂಕೆ ಸತತ 2ನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳುತ್ತಾ? ಎಂಬ ಪ್ರಶ್ನೆ ಭಾರಿ ಚರ್ಚೆಯಾಗುತ್ತಿದೆ.


ಎನ್ ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಎಐಎಡಿಎಂಕೆ ಶತಾಯಗತಾಯ ಅಧಿಕಾರ ಪಡೆಯಲು ರಣತಂತ್ರ ರೂಪಿಸುತ್ತಿದೆ. ಈ ಮಧ್ಯೆ ಚುನಾವಣಾ ಪೂರ್ವ ಸಮೀಕ್ಷೆಗಳು ಗೆಲುವು ಈ ಬಾರಿ ಯಾರಿಗೆ ಒಲಿಯಲಿದೆ ಎಂಬುದನ್ನು ಡಿಕೋಡ್ ಮಾಡುವ ಪ್ರಯತ್ನದಲ್ಲಿವೆ.

ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ, ಆಡಳಿತಾರೂಢ ಡಿಎಂಕೆ ಮೈತ್ರಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಲೋಕ್ ಪೋಲ್ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಮೈತ್ರಿ 234 ಕ್ಷೇತ್ರಗಳಲ್ಲಿ 181ರಿಂದ 189ರಷ್ಟು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು, ಮತಶೇಕಡಾ 40.1ರಷ್ಟು ಬೆಂಬಲ ದೊರೆಯಲಿದೆ. ವಿರೋಧ ಪಕ್ಷವಾದ ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಗೆ 38ರಿಂದ 42 ಸ್ಥಾನಗಳು ಮತ್ತು ಸುಮಾರು 29% ಮತಗಳು ಸಿಗುವ ಸಾಧ್ಯತೆ ಇದೆ ಎಂದು, ಮಾರ್ಚ್ 1ರಿಂದ ಏಪ್ರಿಲ್ 1ರವರೆಗೆ ನಡೆದ ಈ ಸಮೀಕ್ಷೆ ಹೇಳಿದೆ.

ರಾಜಕೀಯಕ್ಕೆ ಹೊಸದಾಗಿ ಕಾಲಿಡುತ್ತಿರುವ ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ 8ರಿಂದ 10 ಸ್ಥಾನಗಳು ಮತ್ತು 23.9% ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ಎನ್‌ಟಿಕೆ ಹಾಗೂ ಇತರ ಪಕ್ಷಗಳು ಗಣನೀಯ ಪ್ರಭಾವ ಬೀರುವ ಸಾಧ್ಯತೆ ಕಡಿಮೆ ಎಂದು ಸಮೀಕ್ಷೆ ಹೇಳಿದ್ದು, ಅವುಗಳಿಗೆ ಕ್ರಮವಾಗಿ 4.9% ಮತ್ತು 2.1% ಮತಗಳು ಸಿಗಬಹುದು ಎಂದು ಅಂದಾಜಿಸಲಾಗಿದೆ.

ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ಮುಖ್ಯಮಂತ್ರಿಯಾಗಿ ಜನಪ್ರಿಯತೆಯ ಮೊದಲ ಆಯ್ಕೆ ಸ್ಟಾಲಿನ್ ಆಗಿದ್ದು, ಅವರ ನಂತರ ವಿಜಯ್ ಮತ್ತು ಎಐಎಡಿಎಂಕೆಯ ಎಡಪ್ಪಾಡಿ ಕೆ. ಪಳನಿಸ್ವಾಮಿ ಹೆಸರುಗಳು ಬಂದಿವೆ. “ಕಳೈಂಗರ್ ಮಗಳಿರ್ ಉರಿಮೈ ತೊಗೈ, ಉಚಿತ ಬಸ್ ಪ್ರಯಾಣ, ಉಪಹಾರ ಯೋಜನೆ ಮುಂತಾದ ಬಲವಾದ ಕಲ್ಯಾಣ ಯೋಜನೆಗಳ ಕಾರಣದಿಂದ ಡಿಎಂಕೆ ಮೈತ್ರಿ ಸ್ಪಷ್ಟ ಮುನ್ನಡೆಯಲ್ಲಿದೆ.

ವಿಶೇಷವಾಗಿ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳ ಮಹಿಳೆಯರೊಂದಿಗೆ ಈ ಯೋಜನೆಗಳು ಉತ್ತಮ ಜನಾಭಿಪ್ರಾಯ ಹೊಂದಿಕೊಂಡಿದ್ದು, ಡಿಎಂಕೆಗೆ ಭಾರೀ ಮುನ್ನಡೆ ನೀಡಿವೆ” ಎಂದು ಲೋಕ್ ಪೋಲ್ ಸಮೀಕ್ಷೆ ತಿಳಿಸಿದೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries