HEALTH TIPS

ಇರಾನ್ ಯುದ್ಧ, LPG ಪೂರೈಕೆ: ರಾಹುಲ್ ಗಾಂಧಿ ನಿಲುವಿನ ಬಗ್ಗೆ ಕಾಂಗ್ರೆಸ್‌ನಲ್ಲೇ ಭಿನ್ನಾಭಿಪ್ರಾಯ

 ನವದೆಹಲಿ:'ಆಪರೇಷನ್ ಸಿಂಧೂರ' ಬಳಿಕ ಇರಾನ್ ಯುದ್ಧ ಮತ್ತು ಎಲ್‌ಪಿಜಿ ಪೂರೈಕೆ ಸ್ಥಿತಿಯು ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕಿದಂತಿದೆ. ಕಮಲನಾಥ್‌, ಆನಂದ ಶರ್ಮಾ, ಶಶಿ ತರೂರ್ ಮತ್ತು ಮನೀಷ್‌ ತಿವಾರಿ ಸೇರಿದಂತೆ ಹಲವಾರು ಹಿರಿಯ ನಾಯಕರು ಮಧ್ಯಪ್ರಾಚ್ಯದಲ್ಲಿನ ಯುದ್ಧ ಮತ್ತು ದೇಶದಲ್ಲಿ ಇಂಧನ ಪೂರೈಕೆ ಸ್ಥಿತಿಯನ್ನು ಮೋದಿ ಸರಕಾರವು ನಿರ್ವಹಿಸುತ್ತಿರುವ ಕುರಿತು ರಾಹುಲ್ ಗಾಂಧಿಯವರ ನಿಲುವಿಗೆ ವಿರುದ್ಧವಾಗಿ ಮಾತನಾಡಿದ್ದಾರೆ.


ಲೋಕಸಭೆಯ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಅಮೆರಿಕ-ಇಸ್ರೇಲ್-ಇರಾನ್ ಯುದ್ಧ ಕುರಿತು ಮೋದಿ ಸರಕಾರದ ರಾಜತಾಂತ್ರಿಕ ನಿಲುವನ್ನು ಪದೇಪದೇ ಟೀಕಿಸಿದ್ದಾರೆ. ಆದರೆ ಕಾಂಗ್ರೆಸ್‌ನ ಹಿರಿಯ ನಾಯಕರು ಆಗಾಗ್ಗೆ ರಾಹುಲ್ ನಿಲುವಿಗೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸರಕಾರವು ನಿರ್ವಹಿಸುತ್ತಿರುವ ರೀತಿಯನ್ನು ಪ್ರಶಂಸಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಸರಕಾರವು ಭಾರತದ ವಿದೇಶಾಂಗ ನೀತಿಯೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ರಾಹುಲ್ ಆರೋಪಿಸಿದ್ದರೆ ಪಕ್ಷದ ಸಂಸದ ಶಶಿ ತರೂರ್‌ ಅವರು ಅದನ್ನು 'ಜವಾಬ್ದಾರಿಯುತ ರಾಜ್ಯತಂತ್ರ' ಎಂದು ಬಣ್ಣಿಸಿದ್ದಾರೆ.

ಕಾಂಗ್ರೆಸ್ ಸಂಸದ ಮನೀಷ್‌ ತಿವಾರಿಯವರು ಸುದ್ದಿವಾಹಿನಿ ಜೊತೆ ಮಾತನಾಡಿದ ಸಂದರ್ಭದಲ್ಲಿ 'ಸರಕಾರವು ಸರಿಯಾದ ಕೆಲಸವನ್ನೇ ಮಾಡುತ್ತಿದೆ' ಎಂದು ಹೇಳಿದ್ದಾರೆ.

ಗುರುವಾರ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರಾದ ಮಾಜಿ ಕೇಂದ್ರ ಸಚಿವ ಆನಂದ್‌ ಶರ್ಮಾ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಅವರು, ಸರಕಾರವು ಪರಿಸ್ಥಿತಿಯನ್ನು ನಿರ್ವಹಿಸುತ್ತಿರುವ ರೀತಿಯನ್ನು ಪ್ರಶಂಸಿಸಿದ್ದರು.

ಸರಣಿ ಎಕ್ಸ್ ಪೋಸ್ಟ್‌ಗಳಲ್ಲಿ ಸರಕಾರವನ್ನು ಶ್ಲಾಘಿಸಿರುವ ಶರ್ಮಾ, ಪಶ್ಚಿಮ ಏಶ್ಯಾ ಬಿಕ್ಕಟ್ಟನ್ನು ಭಾರತವು ರಾಜತಾಂತ್ರಿಕವಾಗಿ ನಿರ್ವಹಿಸುತ್ತಿರುವ ರೀತಿಯನ್ನು 'ಪರಿಪಕ್ವ ಮತ್ತು ಕೌಶಲ್ಯಪೂರ್ಣ' ಎಂದು ಬಣ್ಣಿಸಿದ್ದಾರೆ.

ದೇಶದಲ್ಲಿ ಎಲ್‌ಪಿಜಿ ಕೊರತೆಯಿಲ್ಲ. ಕೆಲವು ವರ್ಗಗಳು ರಾಜಕೀಯ ಲಾಭಕ್ಕಾಗಿ ಕೊರತೆಯಿದೆ ಎಂಬ ವಾತಾವರಣವನ್ನು ಸೃಷ್ಟಿಸುತ್ತಿವೆಯಷ್ಟೇ ಎಂದು ಕಮಲನಾಥ್‌ ಹೇಳಿದ್ದಾರೆ. ಇದು ಎಲ್‌ಪಿಜಿ ಕೊರತೆಯ ಬಗ್ಗೆ ಸರಕಾರವನ್ನು ನಿರಂತರವಾಗಿ ತರಾಟೆಗೆತ್ತಿಕೊಳ್ಳುತ್ತಿರುವ ಕಾಂಗ್ರೆಸ್ ಹೈಕಮಾಂಡ್ ನಿಲುವಿಗೆ ವಿರುದ್ಧವಾಗಿದೆ.

ಕಾಂಗ್ರೆಸ್ ನಾಯಕರು ಹೈಕಮಾಂಡ್ ಜೊತೆ ಭಿನ್ನಾಭಿಪ್ರಾಯ ಹೊಂದಿರುವುದು ಪಕ್ಷದ ವಿರುದ್ಧ ದಾಳಿ ಮಾಡಲು ಬಿಜೆಪಿಗೆ ಸುವರ್ಣಾವಕಾಶವನ್ನು ಒದಗಿಸಿದೆ.

ಈಗ ಕಾಂಗ್ರೆಸ್ ನಾಯಕ ಕಮಲನಾಥ್‌ ಅವರೂ ದೇಶದಲ್ಲಿ ಪೆಟ್ರೋಲ್, ಡೀಸಿಲ್ ಅಥವಾ ಅನಿಲ ಕೊರತೆಯಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಬರೆದಿರುವ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು, ಇದು ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನರಲ್ಲಿ ಭೀತಿ ಮತ್ತು ಅಪನಂಬಿಕೆಯನ್ನು ಸೃಷ್ಟಿಸುವುದನ್ನು ನಿಲ್ಲಿಸಬೇಕಾದ ಸಮಯವಾಗಿದೆ ಎಂದು ಹೇಳಿದ್ದಾರೆ.

ರಾಹುಲ್ ಓರ್ವ ಅವಕಾಶವಾದಿ, ಭಾರತ ವಿರೋಧಿ ಎನ್ನುವುದು ಕಾಂಗ್ರೆಸ್ ನಾಯಕರಿಗೆ ತಿಳಿದಿದೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್‌ ಭಂಡಾರಿ ಟೀಕಿಸಿದ್ದಾರೆ.

ಹಿರಿಯ ನಾಯಕರು ಪಕ್ಷದ ನಿಲುವನ್ನು ವಿರೋಧಿಸುತ್ತಿರುವುದು ಕಾಂಗ್ರೆಸ್‌ಗೆ ಅಥವಾ ರಾಹುಲ್‌ಗೆ ಹೊಸದೇನಲ್ಲ. 'ಆಪರೇಷನ್ ಸಿಂಧೂರ' ಸಂದರ್ಭದಲ್ಲಿ ರಾಹುಲ್ ಸರಕಾರದ 'ರಾಜಕೀಯ ಇಚ್ಛಾಶಕ್ತಿ'ಯನ್ನು ಟೀಕಿಸುತ್ತಿದ್ದರೂ ಪಕ್ಷದ ಹಿತಾಸಕ್ತಿಗಳಿಗಿಂತ ದೇಶದ ಹಿತಾಸಕ್ತಿಗಳು ಮುಖ್ಯ ಎಂದು ಹೇಳಿದ್ದ ತರೂರ್ ಸರಕಾರವನ್ನು ಬೆಂಬಲಿಸಿದ್ದರು.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries