ಹೈದರಾಬಾದ್: 13 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆ ನಿರ್ಬಂಧಿಸಲು ಆಂಧ್ರಪ್ರದೇಶ ಸರ್ಕಾರವು ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಲು ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ 'ಏಜ್ ಟೋಕನ್' ಎಂಬ ವಯಸ್ಸು ದೃಢೀಕರಣ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.
ಕಳೆದ ತಿಂಗಳು ವಿಧಾನಸಭೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು, 13 ವರ್ಷದೊಳಗಿನ ಮಕ್ಕಳ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಮುಂದಿನ 90 ದಿನಗಳೊಳಗೆ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದರು.
ಚಾರಣಿಗರ ಸುರಕ್ಷತೆಗಾಗಿ ಟ್ರ್ಯಾಕಿಂಗ್ ಆಪ್, ವಿಮೆ: ಈಶ್ವರ ಖಂಡ್ರೆ'ಝಾಂಬಿ ಡ್ರಗ್ಸ್' ಕುರಿತು ಅಪಪ್ರಚಾರ ನಡೆಸಿದರೆ ಕ್ರಮ: ಪೊಲೀಸ್ ಕಮಿಷನರ್ ಎಚ್ಚರಿಕೆ
ಇದರ ಮುಂದುವರಿದ ಭಾಗವಾಗಿ, ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ನಾರಾ ಲೋಕೇಶ್ ಅವರು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಸಮಗ್ರ ಚೌಕಟ್ಟನ್ನು ರೂಪಿಸಲು ಸೂಚನೆ ನೀಡಿದ್ದಾರೆ.
ಮಕ್ಕಳ ವೈಯಕ್ತಿಕ ಮಾಹಿತಿ ಸೋರಿಕೆಯಾಗದಂತೆ ವಯಸ್ಸನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಡಿಜಿಲಾಕರ್ (ಜೊತೆಗೆ 'ಏಜ್ ಟೋಕನ್'ಗಳನ್ನು ಸಂಯೋಜಿಸಲು ಯೋಜಿಸಿದೆ.
ಬಳಕೆದಾರರು ತಮ್ಮ ಪೂರ್ಣ ವಿವರಗಳನ್ನು ಹಂಚಿಕೊಳ್ಳುವ ಅಗತ್ಯವಿಲ್ಲ, ನಿರ್ದಿಷ್ಟ ವಯಸ್ಸು ತಲುಪಿದ್ದಾರೆಯೇ ಇಲ್ಲವೇ ಎಂಬ 'ಡಿಜಿಟಲ್ ಸಿಗ್ನಲ್' ಅನ್ನು ಮಾತ್ರ ಈ ಟೋಕನ್ಗಳು ಪ್ಲಾಟ್ಫಾರ್ಮ್ಗಳಿಗೆ ನೀಡುತ್ತವೆ.
ಕೇವಲ 13 ವರ್ಷದೊಳಗಿನವರಿಗೆ ನಿರ್ಬಂಧ ಹೇರುವುದು ಮಾತ್ರವಲ್ಲದೆ, 13 ರಿಂದ 16 ವರ್ಷದೊಳಗಿನವರಿಗೆ ಅವರ ವಯೋಮಾನಕ್ಕೆ ತಕ್ಕಂತಹ ವಿಷಯಗಳು (ಂge-ಚಿಠಿಠಿಡಿoಠಿಡಿiಚಿಣe ಛಿoಟಿಣeಟಿಣ) ಮಾತ್ರ ಸಿಗುವಂತೆ 'ಗ್ರೇಡೆಡ್ ಆಕ್ಸೆಸ್' ಸಿಸ್ಟಮ್ ರೂಪಿಸಲು ಸಚಿವರು ಸೂಚಿಸಿದ್ದಾರೆ. ಇದರಿಂದ ಮಕ್ಕಳು ಹಾನಿಕಾರಕ ಅಥವಾ ಅಸಭ್ಯ ವಿಷಯಗಳಿಂದ ದೂರವಿರಲು ಸಾಧ್ಯವಾಗುತ್ತದೆ.
2 ದಿನ ಕಳೆದರೂ ವಿದ್ಯಾರ್ಥಿನಿ ಪತ್ತೆಯಿಲ್ಲಯುದ್ಧ, ಪಂಚರಾಜ್ಯ ಚುನಾವಣೆ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
ಜಾಗತಿಕ ಮಾದರಿಗಳ ಅಧ್ಯಯನ
ಈ ಯೋಜನೆಯನ್ನು ಜಾರಿಗೊಳಿಸಲು ಆಸ್ಟ್ರೇಲಿಯಾ, ಸಿಂಗಾಪುರ ಮತ್ತು ಡೆನ್ಮಾರ್ಕ್ನಂತಹ ದೇಶಗಳಲ್ಲಿ ಚಾಲ್ತಿಯಲ್ಲಿರುವ ಅತ್ಯುತ್ತಮ ಪದ್ಧತಿಗಳನ್ನು ಅಧ್ಯಯನ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕಠಿಣ ಕಾನೂನು ಕ್ರಮದ ಎಚ್ಚರಿಕೆ
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಿಂದನಾರ್ಹ ಅಥವಾ ದ್ವೇಷಪೂರಿತ ಪೋಸ್ಟ್ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ನಾರಾ ಲೋಕೇಶ್ ಎಚ್ಚರಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಸೆಕ್ಷನ್ 46ರ ಅಡಿಯಲ್ಲಿ ಜಾರಿ ಪ್ರಕ್ರಿಯೆ ಸಂಬಂಧ ಕ್ರಮಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಸಂಬಂಧಪಟ್ಟ ಅಧಿಕಾರಿಗಳನ್ನು ನೇಮಿಸಲು ಲೋಕೇಶ್ ನಿರ್ದೇಶನ ನೀಡಿದ್ದಾರೆ.

