ಧರ್ಮಶಾಲಾ: ಶಾಂತಿ ಸ್ಥಾಪನೆಗಾಗಿ ಪೋಪ್ 14ನೇ ಲಿಯೊ ಮಾಡಿದ ಮನವಿಯನ್ನು ಟಿಬೆಟ್‌ನ ಬೌದ್ಧರ ಧರ್ಮಗುರು ದಲೈ ಲಾಮಾ ಬೆಂಬಲಿಸಿದ್ದಾರೆ.
'ಯಾವುದೇ ಆಧ್ಯಾತ್ಮಿಕ ಸಂಪ್ರದಾಯದಲ್ಲಿ ಹಿಂಸೆಗೆ ಸ್ಥಾನವಿಲ್ಲ. ಎಲ್ಲ ಧರ್ಮಗಳಲ್ಲೂ ಅಹಿಂಸೆ, ಕರುಣೆ ಹಾಗೂ ಸಾಮರಸ್ಯ ಹಂಚಿಕೆಯಾಗಬೇಕು' ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.
'ಗರಿಗಳ ಭಾನುವಾರ' ಆಚರಣೆಯ ಅಂಗವಾಗಿ ವ್ಯಾಟಿಕನ್ ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಜನರಿಗೆ ಸಂದೇಶ ನೀಡಿದ್ದ ಪೋಪ್ 14ನೇ ಲಿಯೊ, 'ಜೀಸಸ್ ಶಾಂತಿಯ ಸಂಕೇತ. ಅವರು ಯಾವ ಯುದ್ಧವನ್ನೂ ಬೆಂಬಲಿಸುವುದಿಲ್ಲ. ಯೇಸು ಬೆಂಬಲದ ಹೆಸರಿನಲ್ಲಿ ಯಾರೂ ಯುದ್ಧವನ್ನು ಸಮರ್ಥಿಸಲಾಗದು' ಎಂದು ತಿಳಿಸಿದ್ದರು.

