HEALTH TIPS

ಅಬಕಾರಿ ನೀತಿ ಪ್ರಕರಣ| ಕೇಜ್ರಿವಾಲ್ ವಾದದ ವೀಡಿಯೊ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆ ದಿಲ್ಲಿ ಹೈಕೋರ್ಟ್ ಸೂಚನೆ

ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನ್ಯಾ.ಸ್ವರಣಕಾಂತಾ ಶರ್ಮಾ ಅವರೆದುರು ವಾದಿಸುತ್ತಿರುವ ವೀಡಿಯೊ ರೆಕಾರ್ಡಿಂಗ್‌ಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ.

ಈ ಬೆಳವಣಿಗೆಯನ್ನು ಸುದ್ದಿಸಂಸ್ಥೆಗೆ ದೃಢಪಡಿಸಿದ ಹೈಕೋರ್ಟ್ ಅಧಿಕಾರಿಯೋರ್ವರು, ನ್ಯಾಯಾಲಯ ಕಲಾಪಗಳ ಅನಧಿಕೃತ ರೆಕಾರ್ಡಿಂಗ್‌ನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದರು.

ಆನ್‌ಲೈನ್‌ ವಿಚಾರಣೆಗಳ ಕುರಿತು ದಿಲ್ಲಿ ಹೈಕೋರ್ಟ್‌ ನಿಯಮಗಳು ನ್ಯಾಯಾಲಯದ ಕಲಾಪಗಳ ಚಿತ್ರೀಕರಣ ಮತ್ತು ವೀಡಿಯೊಗಳ ಪ್ರಕಟಣೆಯನ್ನು ನಿಷೇಧಿಸಿವೆ.

ಅಂತಹ ವೀಡಿಯೊಗಳನ್ನು ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಹರಿಬಿಟ್ಟಿರುವವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದರು.

'ಹೈಕೋರ್ಟ್ ಹಿಂದೆಯೂ ಇಂತಹ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಕೇಜ್ರಿವಾಲ್‌ ವೀಡಿಯೊ ಹೈಕೋರ್ಟ್ ಗಮನಕ್ಕೆ ತೆಗೆದುಕೊಂಡಿರುವ ವೀಡಿಯೊಗಳಲ್ಲಿ ಒಂದಾಗಿದೆ. ಇಂತಹ ಘಟನೆಗಳು ನಮ್ಮ ಗಮನಕ್ಕೆ ಬಂದಾಗ ಅವುಗಳನ್ನು ತೆಗೆದುಹಾಕುವಂತೆ ನಾವು ಕಾನೂನು ಜಾರಿ ಸಂಸ್ಥೆಗಳಿಗೆ ಲಿಖಿತ ಸೂಚನೆ ನೀಡುತ್ತೇವೆ 'ಎಂದರು.

ಎ.13ರಂದು ದಿಲ್ಲಿಉಚ್ಚ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಿದ್ದ ಕೇಜ್ರಿವಾಲ್ ದಿಲ್ಲಿ ಅಬಕಾರಿ ನೀತಿ ಪ್ರಕರಣದ ವಿಚಾರಣೆಯಿಂದ ನ್ಯಾ.ಶರ್ಮಾ ಅವರನ್ನು ಹಿಂದೆಗೆದುಕೊಳ್ಳುವಂತೆ ಕೋರಿ ತಾನು ಸಲ್ಲಿಸಿದ್ದ ಅರ್ಜಿಯ ಪರ ವಾದಿಸಿದ್ದರು.

ಕೇಜ್ರಿವಾಲ್ ಒಂದೂ ಗಂಟೆಗೂ ಹೆಚ್ಚು ಸಮಯ ವಾದವನ್ನು ಮಂಡಿಸಿದ್ದರು. ವಿಚಾರಣೆ ಮುಗಿದ ಬೆನ್ನಿಗೇ ಅವರು ನ್ಯಾಯಾಲಯದಲ್ಲಿ ವಾದಿಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries