HEALTH TIPS

ಮಧ್ಯಪ್ರಾಚ್ಯ ಸಂಘರ್ಷ| ನೇರ ಮಾತುಕತೆಗೆ ಇಸ್ರೇಲ್, ಲೆಬನಾನ್ ಒಪ್ಪಿಗೆ

ವಾಶಿಂಗ್ಟನ್, ಎ.15: ಅಮೆರಿಕದ ವಾಶಿಂಗ್ಟನ್‍ನಲ್ಲಿ ಮಂಗಳವಾರ ನಡೆದ ಉತ್ಪಾದಕ ಮಾತುಕತೆಯ ಬಳಿಕ ಮಹತ್ವದ ಬೆಳವಣಿಗೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನೇರ ಮಾತುಕತೆ ನಡೆಸಲು ಒಪ್ಪಿಕೊಂಡಿವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಟಾಮಿ ಪಿಗೊಟ್ ಹೇಳಿದ್ದಾರೆ.

ಮಂಗಳವಾರ ಅಮೆರಿಕದ ನೇತೃತ್ವದಲ್ಲಿ ನಡೆದ ತ್ರಿಪಕ್ಷೀಯ ಮಾತುಕತೆಯಲ್ಲಿ ಎರಡೂ ನಿಯೋಗಗಳು ಪರಸ್ಪರ ಒಪ್ಪಿದ ಸಮಯ ಮತ್ತು ಸ್ಥಳದಲ್ಲಿ ನೇರ ಮಾತುಕತೆ ನಡೆಸಲು ಸಮ್ಮತಿಸಿದ್ದು ಇದು ಗಡಿಯಲ್ಲಿ ಉದ್ವಿಗ್ನತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸಂಭಾವ್ಯ ಹೆಜ್ಜೆಯಾಗಿದೆ. ಇರಾನ್ ಬೆಂಬಲಿತ ಹಿಜ್ಬುಲ್ಲಾವನ್ನು ವಿರೋಧಿಸುವಲ್ಲಿ ಎರಡೂ ದೇಶಗಳು ಒಂದೇ ನಿಲುವು ಹೊಂದಿವೆ. ಇರಾನ್ ಬೆಂಬಲಿತ ಹಿಜ್ಬುಲ್ಲಾದ ಆಕ್ರಮಣದಿಂದ ಲೆಬನಾನ್ ಅನ್ನು ಸ್ವತಂತ್ರಗೊಳಿಸಲು ನಾವಿಬ್ಬರೂ ಒಗ್ಗೂಡುತ್ತೇವೆ' ಎಂದು ಇಸ್ರೇಲಿ ರಾಯಭಾರಿ ಯೆಚಿಲ್ ಲೀಟರ್ ಹೇಳಿದ್ದಾರೆ.

ಮಾತುಕತೆ ರಚನಾತ್ಮಕವಾಗಿತ್ತು. ಇದೀಗ ಕದನ ವಿರಾಮ, ಸ್ಥಳಾಂತರಗೊಂಡ ನಾಗರಿಕರ ಮರಳುವಿಕೆ ಮತ್ತು ಲೆಬನಾನ್‍ಗೆ ತನ್ನ ಪ್ರದೇಶದ ಮೇಲೆ ಸಂಪೂರ್ಣ ಸಾರ್ವಭೌಮತ್ವದ ನಿಟ್ಟಿನಲ್ಲಿ ಕೆಲಸ ಮಾಡುವ ಅಗತ್ಯವಿದೆ ಎಂದು ಲೆಬನಾನ್ ರಾಯಭಾರಿ ನಡಾ ಹಮದೇಹ್ ಮೊವಾಡ್ ಸಭೆಯ ಬಳಿಕ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries