ವಾಶಿಂಗ್ಟನ್: ಇರಾನ್‍ನ ತೈಲವನ್ನು ಪಡೆಯಲು ಚೀನಾದ ನೌಕೆಗಳು ಹಾರ್ಮುಝ್ ಜಲಸಂಧಿಯ ಮೂಲಕ ಸಾಗಲು ಅನುಮತಿಸಲಾಗುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.
ವಲಯದಲ್ಲಿ ಅಮೆರಿಕದ ಕ್ರಮಗಳು ಚೀನಾವು ಆಯಕಟ್ಟಿನ ಸಮುದ್ರ ಮಾರ್ಗದ ಮೂಲಕ ಇರಾನ್‍ನ ಕಚ್ಛಾತೈಲ ಪಡೆಯುವುದನ್ನು ತಡೆಯುತ್ತವೆ.
ಆದ್ದರಿಂದ ಚೀನಾವು ಇರಾನ್‍ನ ತೈಲ ಪಡೆಯಲು ಸಾಧ್ಯವಾಗುವುದಿಲ್ಲ. ಅವರು ತೈಲವನ್ನು ಪಡೆಯಬಹುದು, ಆದರೆ ಇರಾನ್‍ನ ತೈಲ ಪಡೆಯಲಾಗದು' ಎಂದು ಜಲಸಂಧಿಯಲ್ಲಿ ಅಮೆರಿಕ ಕೈಗೊಂಡಿರುವ ಕ್ರಮಗಳನ್ನು ಉಲ್ಲೇಖಿಸಿ ಬೆಸೆಂಟ್ ಹೇಳಿದ್ದಾರೆ.
ಇರಾನ್‍ನ ತೈಲ ರಫ್ತಿನ 90%ವನ್ನು ಚೀನಾವು ಖರೀದಿಸುತ್ತದೆ. ಇದು ಚೀನಾದ ವಾರ್ಷಿಕ ತೈಲ ಆಮದಿನ 8%ದಷ್ಟು ಆಗಿದೆ ಎಂದು ಬೆಸೆಂಟ್ ಹೇಳಿದ್ದಾರೆ.

