HEALTH TIPS

ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸ್ವಯಂಚಾಲಿತವಾಗಿ ವಿಷಯ ನಿರ್ಬಂಧಿಸಬಲ್ಲ ದೇಶಗಳ ಸಾಲಿಗೆ ಸೇರಿದ ಭಾರತ: ವರದಿ

ನವದೆಹಲಿ: ಸ್ಥಳೀಯ ಕಾನೂನು ಅಗತ್ಯಗಳನ್ನು ಆಧರಿಸಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ವಿಷಯವನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸಬಲ್ಲ ಕೆಲವೇ ದೇಶಗಳ ಸಾಲಿಗೆ ಈಗ ಭಾರತವೂ ಸೇರಿದೆ.

ರಾಜ್ಯ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರದಿಂದ ವಿಷಯಗಳನ್ನು ತೆಗೆದುಹಾಕುವಂತೆ ನೋಟಿಸ್‌ಗಳ ಸುರಿಮಳೆಯನ್ನೇ ಎದುರಿಸಿದ್ದ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಇತ್ತೀಚಿನ ವಾರಗಳಲ್ಲಿ ಭಾರೀ ಪ್ರಮಾಣದಲ್ಲಿ ಸೆನ್ಸಾರ್‌ಶಿಪ್ ಆದೇಶಗಳನ್ನು ಪಾಲಿಸಿದೆ ಎನ್ನಲಾಗಿದೆ.

ಸಹಯೋಗ ಪೋರ್ಟಲ್ ಆನ್‌ಲೈನ್ ವಿಷಯದ ತೆಗೆದುಹಾಕುವಿಕೆಯನ್ನು ಸ್ವಯಂಚಾಲಿತ ಮತ್ತು ತ್ವರಿತಗೊಳಿಸಲು ಕಾನೂನು ಜಾರಿ ಸಂಸ್ಥೆಗಳು ಬಳಸುವ ಕೇಂದ್ರ ಗೃಹ ಸಚಿವಾಲಯದ ಉಪಕ್ರಮವಾಗಿದೆ. ಈ ಪೋರ್ಟಲ್ ಬೃಹತ್ ಪ್ರಮಾಣದಲ್ಲಿ ಟೇಕ್‌ಡೌನ್ ಆದೇಶಗಳನ್ನು ಹೊರಡಿಸಲು, ಏಕಪಕ್ಷೀಯ ಕ್ರಮ ಕೈಗೊಳ್ಳಲು ಹಾಗೂ ಹೆಚ್ಚಾಗಿ ರಾಜಕೀಯ ಟೀಕೆ ಮತ್ತು ವಿಡಂಬನಾತ್ಮಕ ವಿಷಯಗಳನ್ನು ಗುರಿಯಾಗಿಸಿಕೊಂಡು ಐಟಿ ಮಧ್ಯವರ್ತಿಗಳೊಂದಿಗೆ ನೇರವಾಗಿ ಸಂವಹನ ನಡೆಸಲು ಅಧಿಕೃತ ಪೋಲಿಸ್ ಅಧಿಕಾರಿಗಳಿಗೆ ಲಿಂಕ್‌ವೊಂದನ್ನು ಒದಗಿಸಿದೆ. ಅದು ಸ್ವತಂತ್ರ ಪರಿಶೀಲನೆ ಪ್ರಕ್ರಿಯೆ ಪರಿಶೀಲನೆಯನ್ನು ನಡೆಸುವುದಿಲ್ಲ.

ಸಹಯೋಗ ಪೋರ್ಟಲ್ ಮಾಹಿತಿ ತಂತ್ರಜ್ಞಾನ ಕಾಯ್ದೆ,2002ರ ಕಲಂ 79(3)(ಬಿ) ಮತ್ತು ಮಧ್ಯವರ್ತಿ ಮಾರ್ಗಸೂಚಿಗಳು, 2021ರ ನಿಯಮ 3(1)(ಡಿ) ಅಡಿ ಕಾರ್ಯನಿರ್ವಹಿಸುತ್ತದೆ. ಇದರಡಿ ಬಳಕೆದಾರರು ಪೋಸ್ಟ್ ಮಾಡುವ ಕಂಟೆಂಟ್‌ಗಳಿಗಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಕಾನೂನು ಕ್ರಮದಿಂದ ರಕ್ಷಣೆಯನ್ನು ಕಳೆದುಕೊಳ್ಳಬಹುದು ಹಾಗೂ ನ್ಯಾಯಾಲಯದಲ್ಲಿ ಬಳಕೆದಾರರೊಂದಿಗೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಬೇಕಾಗುತ್ತದೆ.

ಭಾರತದ ಐಟಿ ಕಾಯ್ದೆಗಳಡಿ ವೇದಿಕೆಗಳು ತಮ್ಮ ಬಳಕೆದಾರರು ಪೋಸ್ಟ್ ಮಾಡುವ ಕಂಟೆಂಟ್‌ಗಳಿಗೆ ಜವಾಬ್ದಾರರಾಗಿರುವುದಿಲ್ಲ, ಆದರೆ ಸರಕಾರದ ಆದೇಶಗಳನ್ನು ಪಾಲಿಸದಿದ್ದರೆ ಕಾನೂನು ರಕ್ಷಣೆಯನ್ನು ಕಳೆದುಕೊಳ್ಳುವ ಭೀತಿಯಿಂದ ಮೆಟಾ ತನ್ನ ವೇದಿಕೆಗಳಲ್ಲಿ ವಿಷಯಗಳನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸಲು ನಿರ್ಧರಿಸಿದೆ ಎಂದು ವರದಿಯು ತಿಳಿಸಿದೆ.

ನಿರ್ಬಂಧಕ ಆದೇಶಗಳನ್ನು ನಿರ್ವಹಿಸುವ ಐಟಿ ಕಾಯ್ದೆಯ 69(ಎ) ಕಲಂ ಅನ್ನು ಬದಿಗೊತ್ತಿ ಟೇಕ್‌ಡೌನ್ ಆದೇಶಗಳನ್ನು ಹೊರಡಿಸಲು ಸಹಯೋಗ ಪೋರ್ಟಲ್‌ನ ಬಳಕೆಯು ಸರಕಾರಿ ಸೆನ್ಸಾರ್‌ಶಿಪ್‌ಗೆ ಅವಕಾಶ ನೀಡುವ ಅಪಾರದರ್ಶಕ ಸ್ವರೂಪದಿಂದಾಗಿ ಟೀಕೆಗಳಿಗೆ ಗುರಿಯಾಗಿದೆ.

ಮೈಕ್ರೋಬ್ಲಾಗಿಂಗ್ ವೇದಿಕೆ ಎಕ್ಸ್‌ನ ಒಡೆತನ ಹೊಂದಿರುವ ಎಕ್ಸ್ ಕಾರ್ಪ್ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಹಯೋಗ ಪೋರ್ಟಲ್‌ನ್ನು ಪ್ರಶ್ನಿಸಿದೆ. ತೆಗೆದುಹಾಕುವಂತೆ ಸೂಚಿಸಲಾಗಿರುವ ಕಂಟೆಂಟ್ ಕಾನೂನುಬದ್ಧವಾಗಿದೆ ಎಂದು ಅದು ಭಾವಿಸಿದರೆ ಪೋಲಿಸರ ಟೇಕ್‌ಡೌನ್ ನೋಟಿಸ್‌ಗಳನ್ನು ಪಾಲಿಸುವುದಿಲ್ಲ ಎಂದು ವರದಿಯು ಹೇಳಿದೆ.

ಇದಕ್ಕೆ ವ್ಯತಿರಿಕ್ತವಾಗಿ ಮೆಟಾ ಈ ಕಾರ್ಯವಿಧಾನದ ಮೂಲಕ ಸೂಚಿಸಲಾದ ಕಂಟೆಂಟ್‌ಳಿಗೆ ಪ್ರವೇಶವನ್ನು ತಕ್ಷಣವೇ ನಿರ್ಬಂಧಿಸುತ್ತಿದೆ, ಇದು ಪೋಲಿಸ್ ಅಧಿಕಾರಿಗಳಿಗೆ ಕೇವಲ ಆನ್‌ಲೈನ್ ಫಾರ್ಮ್‌ನ್ನು ತುಂಬುವ ಮೂಲಕ ತಾವು ಚಲಾಯಿಸಬಹುದಾದ ತಕ್ಷಣದ ಮತ್ತು ಶಾಶ್ವತವಾದ ಸೆನ್ಸಾರ್‌ಶಿಪ್‌ನ ವ್ಯಾಪಕ ಅಧಿಕಾರಗಳನ್ನು ನೀಡುತ್ತದೆ ಎಂದು ವರದಿಯು ಹೇಳಿದೆ.

ಆತಂಕಕಾರಿ ಸಂಗತಿಯೆಂದರೆ ಮೆಟಾ ಕಾನೂನುಬಾಹಿರವಾಗಿ ವಿಷಯವನ್ನು ತೆಗೆದುಹಾಕಲಾಗಿದೆ ಎಂದು ಅಂತಿಮವಾಗಿ ಒಪ್ಪಿಕೊಂಡರೂ ಅದು ವಿಷಯವನ್ನು ಮರಳಿ ಪೋಸ್ಟ್ ಮಾಡುವುದಿಲ್ಲ. ನಿರ್ಬಂಧಕ ಆದೇಶವನ್ನು ಹಿಂದೆಗೆದುಕೊಳ್ಳುವಂತೆ ಅದು ಸರಕಾರವನ್ನು ಕೇಳುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries