ಇರಾನ್‍ನ ಕ್ಷಿಪಣಿ ಸಾಮರ್ಥ್ಯಗಳು, ನೌಕಾ ಬಲ ಮತ್ತು ಮಿಲಿಟರಿ ನಾಯಕತ್ವವು ತೀವ್ರವಾಗಿ ಬಲಗುಂದಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿರುವ ಇರಾನ್ ಮಿಲಿಟರಿ, ಇರಾನ್‍ನ ಮಿಲಿಟರಿ ಸಾಮರ್ಥ್ಯ, ಶಸ್ತ್ರಾಸ್ತ್ರಗಳ ಕುರಿತ ಅಮೆರಿಕದ ಗುಪ್ತಚರ ವರದಿ ಅಪೂರ್ಣವಾಗಿದೆ ಎಂದು ಟೀಕಿಸಿದೆ.
ಇರಾನ್‍ನ ವಿಶಾಲವಾದ, ಅಗಾಧ ಕಾರ್ಯತಂತ್ರದ ಸಾಮರ್ಥ್ಯದ ಬಗ್ಗೆ ಅಮೆರಿಕಕ್ಕೆ ತಿಳಿದಿಲ್ಲ. ನಮ್ಮ ಕಾರ್ಯತಂತ್ರದ ಕ್ಷಿಪಣಿ ಉತ್ಪಾದನಾ ತಾಣಗಳು, ದೀರ್ಘ ಶ್ರೇಣಿಯ ದಾಳಿ ಡ್ರೋನ್‍ಗಳು, ಆಧುನಿಕ ವಾಯುರಕ್ಷಣಾ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ಯುದ್ಧೋಪಕರಣ ಅಥವಾ ವಿಶೇಷ ಸಾಧನಗಳನ್ನು ನಾಶಪಡಿಸಿದ್ದೀರಿ ಎಂದು ಭಾವಿಸಬೇಡಿ. ನಮ್ಮ ಗೌರವಾನ್ವಿತ, ಪ್ರೀತಿಯ, ಮುಸ್ಲಿಂ ರಾಷ್ಟ್ರದ ವಿರುದ್ಧ ನೀವು ಪ್ರಾರಂಭಿಸಿದ ಆಕ್ರಮಣಕ್ಕೆ ನೀವು ಬೆಲೆ ಪಾವತಿಸಲೇಬೇಕು. ನೀವು ಈಗಾಗಲೇ ಪಡೆದಿರುವ ತೀವ್ರವಾದ ಹೊಡೆತಗಳ ಮುಂದುವರಿಕೆಯಾಗಿ ನಮ್ಮಿಂದ ಇನ್ನಷ್ಟು ವಿನಾಶಕಾರೀ ದಾಳಿಗಳನ್ನು ನಿರೀಕ್ಷಿಸಿ' ಎಂದು ಟ್ರಂಪ್ ಅವರನ್ನು ಉಲ್ಲೇಖಿಸಿದ ಹೇಳಿಕೆ ತಿಳಿಸಿದೆ.

