ಮುಂಬೈ : ಮುಂಬೈ ಮೂಲದ ಮೂಳೆ ಶಸ್ತ್ರಚಿಕಿತ್ಸಕ, ಆರೋಗ್ಯ ತಜ್ಞ ಮತ್ತು ನ್ಯೂಟ್ರಿಬೈಟ್ ವೆಲ್ನೆಸ್ ಸಹ ಸಂಸ್ಥಾಪಕ ಡಾ. ಮನನ್ ವೋರಾ ಇನ್ ಸ್ಟಾಗ್ರಾಮ್ ನಲ್ಲಿ ಐದು ಆಹಾರಗಳಿಗೆ ಹತ್ತರಲ್ಲಿ ಶ್ರೇಯಾಂಕ ನೀಡಿದ್ದಾರೆ.
ಕೆಲವು ಹೊಟ್ಟೆ ತುಂಬಿಸುತ್ತವೆ. ಖಾರ ಖಾರ ಮ್ಯಾಗಿ ತಿನ್ನಲು ಆಕರ್ಷಕವಾಗಿದ್ದರೂ ಆರೋಗ್ಯಕರ ಆಯ್ಕೆಯಲ್ಲ ಎಂದು ಹೇಳಿದ್ದಾರೆ ಮುಂಬೈನ ವೈದ್ಯರು.
ನಾವು ಸೇವಿಸುವ ಒಟ್ಟು ಆಹಾರ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆಯಾದರೂ, ವೈಯಕ್ತಿಕ ಆಹಾರಗಳ ವಿಷಯಕ್ಕೆ ಬಂದಾಗ ಆರೋಗ್ಯಕರ ಆಯ್ಕೆಗಳನ್ನು ಆರಿಸುವುದು ದೇಹದ ಆರೋಗ್ಯಕ್ಕೆ ಸೂಕ್ತ ಹಾದಿಯಾಗಿದೆ. ಈ ನಿಟ್ಟಿನಲ್ಲಿ ಮುಂಬೈ ಮೂಲದ ಮೂಳೆ ಶಸ್ತ್ರಚಿಕಿತ್ಸಕ, ಆರೋಗ್ಯ ತಜ್ಞ ಮತ್ತು ನ್ಯೂಟ್ರಿಬೈಟ್ ವೆಲ್ನೆಸ್ ಸಹ ಸಂಸ್ಥಾಪಕ ಡಾ. ಮನನ್ ವೋರಾ ಇನ್ ಸ್ಟಾಗ್ರಾಮ್ ನಲ್ಲಿ ಐದು ಆಹಾರಗಳಿಗೆ ಹತ್ತರಲ್ಲಿ ಶ್ರೇಯಾಂಕ ನೀಡಿದ್ದಾರೆ.
ಮ್ಯಾಗಿಗೆ 0/10 ಶ್ರೇಯಾಂಕ!
ಯುವಜನರ ಆರಾಮದಾಯಕ ಆಹಾರ ಮ್ಯಾಗಿಯ ಆಕರ್ಷಣೆ ಬಹಳಷ್ಟು ಮಂದಿಯ ಬಾಯಲ್ಲಿ ನೀರೂರಿಸುತ್ತದೆ. ಹಾಗಿದ್ದರೂ, ಮ್ಯಾಗಿ ಆರೋಗ್ಯಕರ ಆಯ್ಕೆಯಲ್ಲ ಎನ್ನುತ್ತಾರೆ ಡಾ. ಮನನ್ ವೋರಾ. ಸೋಡಿಯಂ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುವ ಸಂಸ್ಕರಿತ ಆಹಾರವಾಗಿದೆ. ಸೂಕ್ಷ್ಮ ಪೋಷಕಾಂಶಗಳು ಮತ್ತು ಫೈಬರ್ ಅಂಶ ಕಡಿಮೆ ಇರುತ್ತದೆ. ಆಕರ್ಷಕ ತಿನಿಸಾಗಿ ಕಂಡರೂ ದೀರ್ಘಕಾಲ ಹೊಟ್ಟೆ ತುಂಬಿಸುವುದಿಲ್ಲ.
ಮಾವಿನ ಹಣ್ಣಿಗೆ ಸಿಕ್ಕಿದ್ದು 7.5/10 ರೇಟಿಂಗ್
ಬೇಸಿಗೆ ಬಂದರೆ ಮಾವಿನ ಹಣ್ಣಿನ ಕಾಲ ಬರುತ್ತದೆ. ಬೇಸಗೆಯಲ್ಲಿ ಇದು ಉತ್ತಮ ಆಹಾರ. ವಿಟಮಿನ್ ಎ, ವಿಟಮಿನ್ ಸಿ, ಫೈಬರ್ ಮತ್ತು ಪಾಲಿ ಫಿನಾಲ್ ಗಳು ದಟ್ಟವಾಗಿರುತ್ತವೆ. ರೋಗನಿರೋಧಕ ಶಕ್ತಿ, ಚರ್ಮ ಮತ್ತು ಜೀರ್ಣಕ್ರಿಯೆ ವೃದ್ಧಿಸಲು ಉತ್ತಮ ಆಹಾರ. ಮಾವಿನಲ್ಲಿ ನೈಸರ್ಗಿಕ ಸಕ್ಕರೆ ಇರುವ ಕಾರಣದಿಂದ ಮಧುಮೇಹಿಗಳು ನಿಯಂತ್ರಣದಲ್ಲಿ ಸೇವಿಸುವುದು ಅಗತ್ಯ.
ಕಲ್ಲಂಗಡಿಗೆ 8/10
ವೈದ್ಯರ ಪ್ರಕಾರ ಬೇಸಿಗೆಯ ಮತ್ತೊಂದು ಜನಪ್ರಿಯ ಹಣ್ಣು ಕಲ್ಲಂಗಡಿ ಆರೋಗ್ಯ ವಿಚಾರದಲ್ಲಿ ಮಾವಿಗಿಂತ ಉನ್ನತ ಸ್ಥಾನದಲ್ಲಿದೆ. ಕಲ್ಲಂಗಡಿ ಶೇ. 90ರಷ್ಟು ನೀರನ್ನು ಒಳಗೊಂಡಿರುವ ಹೈಡ್ರೇಟಿಂಗ್ ಹಣ್ಣು. ವಿಟಮಿನ್ ಸಿ, ವಿಟಮಿನ್ ಎ, ಬೀಟಾ ಕ್ಯಾರೋಟಿನ್ ಮತ್ತು ಲೈಕೋಪೀನ್ ನ ಅತ್ಯುತ್ತಮ ಮೂಲವಾಗಿದೆ. ಹೀಗಾಗಿ ಹೃದಯದ ಆರೋಗ್ಯಕ್ಕೆ ಬೆಂಬಲಿಸುತ್ತದೆ. ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ. ತಾಜಾ ಮತ್ತು ಋತುವಿನಲ್ಲಿ ಸೇವಿಸಿದರೆ ಉತ್ತಮ.
ಬ್ರುಕೊಲಿಗೆ 9/10 ಶ್ರೇಯಾಂಕ
ಬ್ರುಕೊಲಿ ಬಹಳ ಪೌಷ್ಠಿಕಾಂಶವಿರುವ ತರಕಾರಿ. ವೈದ್ಯರ ಪ್ರಕಾರ ವಿಟಮಿನ್ ಸಿ, ವಿಟಮಿನ್ ಕೆ, ಫೈಬರ್, ಫೋಲೇಟ್ ಮತ್ತು ಸಲ್ಫೋರಾಫೇನ್ ಸಮೃದ್ಧವಾಗಿದೆ. ಉರಿಯೂತ ನಿವಾರಕ ಮತ್ತು ಸಂಭಾವ್ಯ ಕ್ಯಾನ್ಸರ್ ವಿರೋಧಿ ಪ್ರಯೋಜನಗಳಿಗೆ ಸಂಬಂಧಿಸಿದ ಸಂಯುಕ್ತವಾಗಿದೆ.
ಪಾರ್ಮೆಸನ್ ಚೀಸ್ ಗೆ 8/10 ಶ್ರೇಯಾಂಕ:
ಪಾರ್ಮೆಸನ್ ಚೀಸ್ ವಿವಿಧ ರೀತಿಯ ಭಕ್ಷ್ಯಗಳ ರುಚಿಯನ್ನು ತಕ್ಷಣವೇ ಹೆಚ್ಚಿಸುವುದಲ್ಲದೆ, ಕ್ಯಾಲ್ಸಿಯಂನಲ್ಲಿ ಬಹಳ ಸಮೃದ್ಧವಾಗಿದೆ. 100 ಗ್ರಾಂಗೆ ಸುಮಾರು 110 ಮಿ.ಗ್ರಾಂ ಕ್ಯಾಲ್ಸಿಯಂ ಅಂಶ ಇರುತ್ತದೆ. ಇದು ಪ್ರೋಟೀನ್ ಮತ್ತು ವಿಟಮಿನ್ ಕೆ2 ಅನ್ನೂ ಒದಗಿಸುತ್ತದೆ. ಮೂಳೆಯ ಆರೋಗ್ಯವನ್ನು ಬೆಂಬಲಿಸುತ್ತದೆ.

