HEALTH TIPS

ವಂದೇ ಭಾರತ್ ರೈಲಿನ ಊಟದಲ್ಲಿ ಮತ್ತೆ ಹುಳ ಪತ್ತೆ: ಮಾರಾಟಗಾರನಿಗೆ ₹10 ಲಕ್ಷ ದಂಡ

ನವದೆಹಲಿ: ಇತ್ತೀಚೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರು ಖರೀದಿಸುವ ಊಟದಲ್ಲಿ ಹುಳ ಪತ್ತೆಯಾಗುವುದು ಪದೇ ಪದೇ ಮರುಕಳಿಸುತ್ತಲೇ ಇದೆ. ಇದೀಗ ಮತ್ತೆ ಪ್ರಯಾಣಿಕರೊಬ್ಬರು ಖರೀದಿಸಿದ ಆಹಾರದಲ್ಲಿ ಹುಳುಗಳು ಇರುವುದಾಗಿ ಆರೋಪ ಮಾಡಿದ್ದಾರೆ.

ಆ ಕೂಡಲೇ ಎಚ್ಚೆತ್ತುಕೊಂಡ ರೈಲ್ವೆ ಸಚಿವಾಲಯವು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ಮಾರಾಟಗಾರನಿಗೆ ₹10 ಲಕ್ಷ ದಂಡ ವಿಧಿಸಿದ್ದು, ಅವರ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಲು ಆದೇಶಿಸಲಾಗಿದೆ.

ವಂದೇ ಭಾರತ್ ರೈಲಿನಲ್ಲಿ ಆಗಿದ್ದೇನು?

ಮುಂಬೈ ನಿವಾಸಿಯೊಬ್ಬರು ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರೈಲಿನಲ್ಲಿ ಊಟವನ್ನು ಖರೀಸಿದ್ದಾರೆ. ಆದರೆ ಊಟದಲ್ಲಿ ಜಿರಳೆ ರೀತಿಯಲ್ಲಿ ಇರುವಂತಹ ಹುಳವನ್ನು ಕಂಡು ಪ್ರಯಾಣಿಕ ಅಚ್ಚರಿಗೊಂಡಿದ್ದಾರೆ. ಆ ಕೂಡಲೇ ಪ್ರಯಾಣಿಕ ಎಕ್ಸ್‌ ಖಾತೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಇದರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದಿದ್ದಾರೆ. 'ರೈಲಿನಲ್ಲಿ ಎಫ್‌ಎಸ್‌ಎಸ್‌ಎಐ ನಿಯಮಗಳ ಪ್ರಕಾರ ಆಹಾರವನ್ನು ತಯಾರಿಸುತ್ತಿಲ್ಲ ಎಂದು ನನಗೆ ಖಚಿತವಾಗಿದೆ. ತಪ್ಪಿತಸ್ಥರನ್ನು ಹುಡುಕಿ ಅವರ ಪರವಾನಗಿಯನ್ನು ರದ್ದುಗೊಳಿಸಬೇಕು. ಇದು ಲಂಚದ ಮೂಲಕ ಇತ್ಯರ್ಥವಾಗುವುದಿಲ್ಲ ಎಂದು ಭಾವಿಸುತ್ತೇನೆ' ಎಂದು ಅವರು ಬರೆದಿದ್ದಾರೆ.

ವಂದೇ ಭಾರತ್ ರೈಲಿನಲ್ಲಿ ಖರೀದಿಸಿದ ಊಟದಲ್ಲಿ ಹುಳ ಪತ್ತೆಯಾಗಿದ್ದು ಇದೇ ಮೊದಲಲ್ಲ. ಮಾರ್ಚ್ 15ರಂದು ಪಟ್ನಾ-ಟಾಟಾನಗರ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ರಿತೇಶ್ ಕುಮಾರ್ ಸಿಂಗ್ ಎಂಬುವವರು ತೆಗೆದುಕೊಂಡ ಊಟದಲ್ಲಿಯೂ ಹುಳುಗಳು ಇರುವುದು ಪತ್ತೆಯಾಗಿತ್ತು. ಆ ಬೆನ್ನಲ್ಲೆ ಇದೀಗ ಮತ್ತೆ ಈ ರೀತಿಯ ಘಟನೆ ಮರುಕಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries