ನವದೆಹಲಿ (PTI): ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸು ವವರು ಡಿಜಿಟಲ್ ರೂಪದಲ್ಲಿ ಮಾತ್ರವೇ ರಸ್ತೆ ಶುಲ್ಕವನ್ನು ಪಾವತಿಸುವ ನಿಯಮವು ಶನಿವಾರದಿಂದ ಜಾರಿಗೆ ಬಂದಿದೆ.
ರಸ್ತೆ ಶುಲ್ಕ ವಸೂಲಾತಿ ಕೇಂದ್ರಗಳಲ್ಲಿ (ಟೋಲ್ ಪ್ಲಾಜಾ) ನಗದು ಬಳಸಿ ಹಣ ಪಾವತಿಸುವ ಸೌಲಭ್ಯವು ಸ್ಥಗಿತಗೊಂಡಿದ್ದು,ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕವೇ ಶುಲ್ಕ ಪಾವತಿ ಮಾಡಬೇಕು.
ವಿಧಾನಸಭೆ ಚುನಾವಣೆ ನಡೆಯುತ್ತಿರುವ ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆ ಈ ನಿಯಮ ಜಾರಿಯಾಗಲಿದೆ ಎಂದು ಕೇಂದ್ರ ಸರ್ಕಾರವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

