HEALTH TIPS

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಘೋಷಣೆಗೆ ವಿಶ್ವಸಂಸ್ಥೆ ಸ್ವಾಗತ: ಶಾಶ್ವತ ಶಾಂತಿಗೆ ಗುಟೆರೆಸ್ ಕರೆ

ವಸಷಿಂಗ್ಟನ್/ನ್ಯೂಯಾರ್ಕ್: ಅಮೆರಿಕ ಮತ್ತು ಇರಾನ್ ನಡುವೆ ಘೋಷಿಸಲಾದ ಎರಡು ವಾರಗಳ ಕದನ ವಿರಾಮವನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸ್ವಾಗತಿಸಿದ್ದಾರೆ ಎಂದು ಅವರ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ.

"ಈ ಪ್ರದೇಶದಲ್ಲಿ ಶಾಶ್ವತ ಮತ್ತು ಸಮಗ್ರ ಶಾಂತಿಗೆ ದಾರಿ ಮಾಡಿಕೊಡಲು, ಅಂತರರಾಷ್ಟ್ರೀಯ ಕಾನೂನಿನಡಿ ತಮ್ಮ ಬಾಧ್ಯತೆಗಳನ್ನು ಪಾಲಿಸುವುದರ ಜೊತೆಗೆ ಕದನ ವಿರಾಮದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು" ಎಂದು ಗುಟೆರೆಸ್ ಮೂರು ದೇಶಗಳಿಗೆ ಕರೆ ನೀಡಿದ್ದಾರೆ.

"ನಾಗರಿಕರ ಜೀವ ರಕ್ಷಣೆ ಹಾಗೂ ಮಾನವೀಯ ಸಂಕಷ್ಟವನ್ನು ಕಡಿಮೆಗೊಳಿಸುವ ದೃಷ್ಟಿಯಿಂದ ಯುದ್ಧಗಳನ್ನು ಅಂತ್ಯಗೊಳಿಸುವುದು ತುರ್ತು ಅಗತ್ಯವಾಗಿದೆ" ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವೈಯಕ್ತಿಕ ರಾಯಭಾರಿ ಜೀನ್ ಅರ್ನಾಲ್ಟ್ ಶಾಶ್ವತ ಶಾಂತಿ ಸಾಧನೆಗೆ ಸಂಬಂಧಿಸಿದ ಪ್ರಯತ್ನಗಳಿಗೆ ಬೆಂಬಲ ನೀಡಲು ಈ ಪ್ರದೇಶದಲ್ಲೇ ಇರುವುದಾಗಿ ಡುಜಾರಿಕ್ ಸ್ಪಷ್ಟಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries