ಉಪ್ಪಳ: ಚೇವಾರು ಚೆಂಡೆಕಮ್ತಿಯವರ ಮನೆಯ ಪೈವಳಿಕೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ದಿ.ಚೇವಾರು ಜನಾರ್ದನ ಕಾಮತ್ ಅವರ ಪತ್ನಿ ಸುಂದರಿ ಕಾಮತ್ (90 ) ಶುಕ್ರವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪುತ್ರ, ನಾಲ್ವರು ಪುತ್ರಿಯರು ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರು ಕೊಡುಗೈ ದಾನಿಯಾಗಿದ್ದು ಓರ್ವರಿಗೆ ಮನೆ ನಿರ್ಮಿಸಲು ತಮ್ಮ ಸ್ಥಳ ನೀಡಿ ಮನೆ ನಿರ್ಮಿಸಲು ನೆರವಾಗಿದ್ದರು. ಮೃತರ ಮನೆಗೆ ವಿವಿಧ ರಾಜಕೀಯ,ಧಾರ್ಮಿಕ ನಾಯಕರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

-sundari%20kamath.jpg)
