HEALTH TIPS

ದೇಹತೂಕ ಕಡಿಮೆಗೊಳಿಸುವ GLP-1 ಔಷಧಿಗಳ ಅನಧಿಕೃತ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಸರ್ಕಾರ

ನವದೆಹಲಿ: ದೇಹತೂಕವನ್ನು ಕಡಿಮೆಗೊಳಿಸುವ GLP-1 ಆಧಾರಿತ ಔಷಧಿಗಳನ್ನು ಟೈಪ್ 2 ಡಯಾಬಿಟಿಸ್ ಹಾಗೂ ಬೊಜ್ಜು ದೇಹದ ಸಮಸ್ಯೆಗೆ ಚಿಕಿತ್ಸೆಗಾಗಿ ವೈದ್ಯರ ಶಿಫಾರಸಿನ ಮೇರೆಗೆ ಬಳಸಲಾಗುತ್ತದೆ. ಆದರೆ ಅವು ಗಂಭೀರ ಅಡ್ಡಪರಿಣಾಮಗಳನ್ನುಂಟು ಮಾಡಬಹುದಾದ ಕಾರಣ, ಅರ್ಹ ವೈದ್ಯಕೀಯ ತಜ್ಞರ ಮೇಲ್ವಿಚಾರಣೆಯಡಿಯಲ್ಲೇ ಸೇವಿಸಬೇಕು ಎಂದು ಕೇಂದ್ರ ಸರ್ಕಾರ ಬುಧವಾರ ಎಚ್ಚರಿಕೆ ನೀಡಿದೆ.

GLP-1 ಔಷಧಿಯ ವಿವಿಧ ರೂಪಗಳು ಭಾರತೀಯ ಮಾರುಕಟ್ಟೆಗೆ ಇತ್ತೀಚೆಗೆ ಬಿಡುಗಡೆಗೊಂಡಿವೆ. ಆದರೆ ರಿಟೇಲ್ ಔಷಧಿ ಮಳಿಗೆಗಳು, ಆನ್‌ ಲೈನ್ ವೇದಿಕೆಗಳು, ಸಗಟು ಔಷಧಿ ವ್ಯಾಪಾರಿಗಳು ಹಾಗೂ ಆರೋಗ್ಯಕ್ಷೇಮ (ವೆಲ್‌ ನೆಸ್) ಕ್ಲಿನಿಕ್‌ ಗಳಲ್ಲಿ ಅವು ಸುಲಭವಾಗಿ ಲಭ್ಯವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಈ ಔಷಧಿಗಳ ಅನಧಿಕೃತ ಮಾರಾಟ ಹಾಗೂ ಪ್ರಚಾರದ ವಿರುದ್ಧ ಶಾಸನಾತ್ಮಕ ಕಣ್ಗಾವಲನ್ನು ತೀವ್ರಗೊಳಿಸಲಾಗಿದೆ.

ಮುಂದಿನ ವಾರಗಳಲ್ಲಿ ಈ ಕುರಿತು ಕಟ್ಟುನಿಟ್ಟಿನ ತಪಾಸಣೆ ಮತ್ತು ಕಣ್ಗಾವಲು ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ನಿಯಮಗಳನ್ನು ಉಲ್ಲಂಘಿಸುವ ಉದ್ಯಮ ಸಂಸ್ಥೆಗಳ ಲೈಸೆನ್ಸ್ ರದ್ದು, ದಂಡ ವಿಧಿಸುವುದು ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

GLP-1 ಔಷಧಿಗಳು ಹಾರ್ಮೋನುಗಳ ಅಸಮತೋಲನವನ್ನು ಸರಿಪಡಿಸುವ ಸಾಮರ್ಥ್ಯ ಹೊಂದಿದ್ದು, ಟೈಪ್ 2 ಡಯಾಬಿಟಿಸ್ ಹಾಗೂ ಬೊಜ್ಜು ದೇಹದ ಚಿಕಿತ್ಸೆಗೆ ಬಳಸಲಾಗುತ್ತಿವೆ. ಇವು ಇನ್ಸುಲಿನ್ ಬಿಡುಗಡೆಯನ್ನು ಪ್ರಚೋದಿಸುವುದರ ಜೊತೆಗೆ ಹೆಚ್ಚುವರಿ ಗ್ಲುಕಾಗೊನ್ ರಸವನ್ನು ಹತ್ತಿಕ್ಕಿ, ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತವೆ.

ಹಸಿವು ಹಾಗೂ ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಈ ಔಷಧಿಗಳು ದೇಹತೂಕ ಇಳಿಕೆಗೆ ಸಹಕಾರಿಯಾಗುತ್ತವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries