ನವದೆಹಲಿ: ದೇಶದಾದ್ಯಂತ ಅಡುಗೆ ಅನಿಲದ (LPG) ಕೊರತೆ ಉಂಟಾಗಬಹುದು ಎಂಬ ಆತಂಕದ ನಡುವೆಯೇ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಏಪ್ರಿಲ್ 4 ರಂದು ಒಂದೇ ದಿನ ದೇಶಾದ್ಯಂತ 51 ಲಕ್ಷಕ್ಕೂ ಹೆಚ್ಚು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸಲಾಗಿದ್ದು, ಯಾವುದೇ ಗ್ಯಾಸ್ ಏಜೆನ್ಸಿಗಳಲ್ಲಿ ದಾಸ್ತಾನು ಕೊರತೆ (Dry-out) ವರದಿಯಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಶನಿವಾರ ಒಂದೇ ದಿನ 51 ಲಕ್ಷ ಸಿಲಿಂಡರ್ ವಿತರಿಸುವ ಮೂಲಕ ತೈಲ ಕಂಪನಿಗಳು ಪೂರೈಕೆ ಸರಪಳಿಯನ್ನು ಬಲಪಡಿಸಿವೆ. ಇದು ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ವಿತರಣೆಯಾಗಿದೆ.ಎಲ್‌ಪಿಜಿ ಬುಕ್ಕಿಂಗ್ ಮಾಡುವವರಲ್ಲಿ ಶೇ. 95ರಷ್ಟು ಗ್ರಾಹಕರು ಆನ್‌ಲೈನ್ ಅಥವಾ ಡಿಜಿಟಲ್ ಮಾರ್ಗಗಳನ್ನು ಬಳಸುತ್ತಿದ್ದಾರೆ. ಇದು ಪಾರದರ್ಶಕತೆಗೆ ಸಹಕಾರಿಯಾಗಿದೆ.
ಸಿಲಿಂಡರ್ ದುರುಪಯೋಗ ತಡೆಯಲು 'ಡೆಲಿವರಿ ಅಥೆಂಟಿಕೇಶನ್ ಕೋಡ್' (DAC) ಆಧಾರಿತ ವಿತರಣೆಯನ್ನು ಶೇ. 53 ರಿಂದ ಶೇ. 90ಕ್ಕೆ ಹೆಚ್ಚಿಸಲಾಗಿದೆ. ಅಂದರೆ, ಓಟಿಪಿ (OTP) ಮೂಲಕವೇ ಹೆಚ್ಚಿನ ಸಿಲಿಂಡರ್ ವಿತರಣೆಯಾಗುತ್ತಿದೆ.

