HEALTH TIPS

WhatsApp ಮೆಸೆಜ್‌ ಮಾಡುವಾಗ ಈ ಸೀಕ್ರೆಟ್ ಫೀಚರ್‌ ಬಳಕೆ ಮಾಡಿದ್ದೀರಾ?

 ಇಂದಿನ ಡಿಜಿಟಲ್ ಜಮಾನಾದಲ್ಲಿ Whಚಿಣsಂಠಿಠಿ ಅಪ್ಲಿಕೇಶನ್ ಸ್ಮಾರ್ಟ್‌ಫೋನ್‌ ಬಳಸುವ ಪ್ರತಿಯೊಬ್ಬರ ದಿನನಿತ್ಯದ ಜೀವನದ ಅವಿಭಾಜ್ಯ ಭಾಗವಾಗಿದೆ. ಮೆಸೆಜ್‌, ಕಾಲ್, ಫೋಟೋ ಹಾಗೂ ವಿಡಿಯೋ ಶೇರ್ ಮಾಡಲು ವಾಟ್ಸಾಪ್‌ ಅನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಆದರೆ ಅನೇಕ ಬಳಕೆದಾರರು ವಾಟ್ಸಾಪ್‌ನಲ್ಲಿ ಇರುವ ಹಲವು ಉಪಯುಕ್ತ ಮತ್ತು ಸೀಕ್ರೆಟ್ ಫೀಚರ್‌ಗಳನ್ನು ಗಮನಿಸುವುದು ವಿರಳ. ಈ ಆಪ್‌ನಲ್ಲಿರುವ ಸೀಕ್ರೆಟ್ ಫೀಚರ್‌ಗಳು ಬಳಕೆದಾರರ ಪ್ರೈವಸಿ ಹೆಚ್ಚಿಸುವುದರ ಜೊತೆಗೆ ಆಪ್ ಬಳಕೆಯನ್ನು ಇನ್ನಷ್ಟು ಸುಲಭ ಹಾಗೂ ಸ್ಮಾರ್ಟ್ ಆಗಿ ಮಾಡುತ್ತವೆ. ವಾಟ್ಸಪ್‌ ಸೀಕ್ರೆಟ್ ಫೀಚರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. 


WhatsApp ಚಾಟ್‌ ಲಾಕ್‌ ಆಯ್ಕೆ

WhatsApp ನಲ್ಲಿ ಚಾಟ್ ಲಾಕ್ ಆಯ್ಕೆ ಇದೆ. ಇದು ಬಹಳ ಉಪಯುಕ್ತವಾದ ಫೀಚರ್ ಆಗಿದೆ. ಬಳಕೆದಾರರು ಯಾವುದಾದರೂ ಖಾಸಗಿ ಚಾಟ್ ಅನ್ನು ಲಾಕ್ ಮಾಡಬಹುದು. ಅದಕ್ಕಾಗಿ Settings > Privacy > Chat Lock ಮೂಲಕ ಈ ಆಯ್ಕೆಯನ್ನು ಆನ್ ಮಾಡಿದಾಗ ಆ ಚಾಟ್ ತೆರೆಯಲು fingerprint ಅಥವಾ password ಬೇಕಾಗುತ್ತದೆ. ಇದರಿಂದ ನಿಮ್ಮ ಪ್ರೈವಸಿ ಸುರಕ್ಷಿತವಾಗುತ್ತದೆ.

Whatsapp

Disappearing ಮೆಸೆಜ್‌

ವಾಟ್ಸಪ್‌ನಲ್ಲಿರುವ Disappearing ಮೆಸೆಜ್‌ ಸಹ ಉಪಯುಕ್ತ ಆಯ್ಕೆ ಆಗಿದೆ. ಈ ಫೀಚರ್ ಆನ್ ಮಾಡಿದರೆ ನೀವು ಕಳುಹಿಸಿದ ಮೆಸೇಜ್‌ಗಳು ನಿಗದಿತ ಸಮಯದ ನಂತರ ಆಟೋಮ್ಯಾಟಿಕ್ ಆಗಿ ಡಿಲೀಟ್‌ ಆಗಿ ಹೋಗುತ್ತವೆ. ಆಟೋಮ್ಯಾಟಿಕ್ ಆಗಿ ಡಿಲೀಟ್‌ ಆಗಲು 24 ಗಂಟೆ, 7 ದಿನ ಅಥವಾ 90 ದಿನಗಳ ಆಯ್ಕೆ ಲಭ್ಯವಿದೆ.

View Once Media

ಬಳಕೆದಾರರು ಕಳುಹಿಸುವ ಫೋಟೋ ಅಥವಾ ವಿಡಿಯೋವನ್ನು ಮೆಸೆಜ್‌ ಸ್ವೀಕರಿಸಿದವರು ಅದನ್ನು ಒಮ್ಮೆ ಮಾತ್ರ ನೋಡಲು ಅವಕಾಶ ಕೊಡಬಹುದು. ಇದನ್ನು ಬಳಸಲು media ಕಳುಹಿಸುವಾಗ 1 ಐಕಾನ್ ಮೇಲೆ ಟ್ಯಾಪ್ ಮಾಡಬೇಕು. ಇದು ಸೆನ್ಸಿಟಿವ್ ಫೈಲ್‌ಗಳಿಗೆ ಬಹಳ ಉಪಯುಕ್ತ.

ಎಡಿಟ್‌ ಸೆಂಟ್‌ ಮೆಸೆಜ್‌

ಎಡಿಟ್‌ ಸೆಂಟ್‌ ಮೆಸೆಜ್‌ ಕೂಡ ಅನುಕೂಲಕರ ಫೀಚರ್ ಆಗಿದೆ. ಬಳಕೆದಾರರು ಕಳುಹಿಸಿದ ಮೆಸೇಜ್‌ನಲ್ಲಿ ತಪ್ಪು ಇದ್ದರೆ ಅದನ್ನು ಈ ಆಯ್ಕೆ ಮೂಲಕ ಮತ್ತೆ ಸರಿಪಡಿಸಬಹುದು. ಇದನ್ನು ಬಳಕೆ ಮಾಡಲು ಮೆಸೇಜ್ ಮೇಲೆ long press ಮಾಡಿ Edit ಆಯ್ಕೆ ಕ್ಲಿಕ್ ಮಾಡಬಹುದು. ಈ ಆಯ್ಕೆ ನಿಗದಿತ ನಿಮಿಷಗಳೊಳಗೆ ಮಾತ್ರ ಕೆಲಸ ಮಾಡುತ್ತದೆ.

Mute Unknown Calls

ಅನಾಮಿಕ ಅಥವಾ ಅಪರಿಚಿತ ಸಂಖ್ಯೆಯಿಂದ ಬರುವ ಕಾಲ್‌ಗಳನ್ನು ಮ್ಯೂಟ್ ಮಾಡಬಹುದು. ಇದಕ್ಕಾಗಿ Settings > Privacy > Calls ನಲ್ಲಿ ಈ ಆಯ್ಕೆಯನ್ನು ಆನ್ ಮಾಡಬಹುದು. ಇದು ಸ್ಪ್ಯಾಮ್ ಕಾಲ್‌ಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಮಲ್ಟಿ ಡಿವೈಸ್‌ ಸಪೋರ್ಟ್‌

ಮಲ್ಟಿ ಡಿವೈಸ್‌ ಸಪೋರ್ಟ್‌ ಆಯ್ಕೆ ಸಹ ಬಳಕೆದಾರರಿಗೆ ಉಪಯುಕ್ತ ಎನಿಸುತ್ತದೆ. ಒಂದೇ ವಾಟ್ಸಪ್‌ ಖಾತೆ ಅನ್ನು ಒಂದಕ್ಕಿಂತ ಹೆಚ್ಚು devices ಗಳಲ್ಲಿ ಬಳಸಬಹುದು. ಇದರಿಂದ ಲ್ಯಾಪ್‌ಟಾಪ್ ಅಥವಾ ಟ್ಯಾಬ್‌ನಲ್ಲಿ ಕೂಡ ಸುಲಭವಾಗಿ ಚಾಟ್ ಮಾಡಬಹುದು.






Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries