HEALTH TIPS

15,660 ಕೋಟಿ ರೂ.ಗೆ ಮಾರಾಟವಾದ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ : ಮಿತ್ತಲ್ ಫ್ಯಾಮಿಲಿ, ಪೂನಾವಾಲಾ ಹೊಸ ಮಾಲಕರು

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಿತ್ತಲ್ ಫ್ಯಾಮಿಲಿ ತನ್ನದಾಗಿಸಿಕೊಂಡಿದೆ ಎಂದು ತಂಡವು ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

'ಲಕ್ಷ್ಮೀ ಮಿತ್ತಲ್ ಹಾಗೂ ಆದಿತ್ಯ ಮಿತ್ತಲ್, ಆದರ್ ಪೂನಾವಾಲಾ ಜೊತೆಗಿನ ಪಾಲುದಾರಿಕೆಯಲ್ಲಿ ಇಂದು ಮನೋಜ್ ಬದಾಲೆ ಹಾಗೂ ಅವರ ಸಮೂಹದಿಂದ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯನ್ನು ಖರೀದಿಸಲು ನಿರ್ಣಾಯಕ ಒಪ್ಪಂದಕ್ಕೆ ಬರಲಾಗಿದೆ ಎಂದು ಘೋಷಿಸಿದ್ದಾರೆ' ಎಂದು ತಂಡವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮಿತ್ತಲ್ ಕುಟುಂಬವು ಫ್ರಾಂಚೈಸಿಯ ಬಹುಪಾಲು ಪಾಲುದಾರರಾಗಿದ್ದು, ಶೇಕಡಾ 75ರಷ್ಟು ಮಾಲಿಕತ್ವವನ್ನು ಹೊಂದಿದ್ದಾರೆ. ಬಿಲಿಯನೇರ್ ಆದರ್ ಪೂನಾವಾಲಾ ಶೇಕಡಾ 18ರಷ್ಟು ಪಾಲನ್ನು ಪಡೆದುಕೊಂಡಿದ್ದಾರೆ. ಹಾಲಿ ಮಾಲಕ ಮನೋಜ್ ಶೇ.7ರಷ್ಟು ಪಾಲನ್ನು ಹೊಂದಿದ್ದಾರೆ.

ಪೂನಾವಾಲಾ ಅವರು ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಗಿದ್ದಾರೆ. ಈ ಸಂಸ್ಥೆಯು ಭಾರತದಲ್ಲಿ ಬಳಸಲಾಗಿರುವ ಕೋವಿಡ್-19 ಲಸಿಕೆಗಳಲ್ಲಿ ಒಂದಾದ ಕೋವಿಶೀಲ್ಡ್ ಅನ್ನು ಅಭಿವೃದ್ದಿಪಡಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ವರ್ಷ 16,600 ಕೋ.ರೂ.ಗಳಿಗೆ ಮಾರಾಟವಾಗಿದೆ. ಇದೀಗ ರಾಜಸ್ಥಾನ ರಾಯಲ್ಸ್ ತಂಡವು ಮಾರಾಟವಾಗಿರುವ ಎರಡನೇ ಫ್ರಾಂಚೈಸಿಯಾಗಿದೆ. ರಾಜಸ್ಥಾನ ಫ್ರಾಂಚೈಸಿ 2008ರ ಮೊದಲ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಗೆದ್ದುಕೊಂಡಿತ್ತು.

ಲಕ್ಷ್ಮೀ ಅವರು ವಿಶ್ವದ ಅತಿ ದೊಡ್ಡ ಸ್ಟೀಮ್‌ಮೇಕಿಂಗ್ ಕಂಪೆನಿಗಳಲ್ಲಿ ಒಂದಾದ ಆರ್ಸೆಲರ್ ಮಿತ್ತಲ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರೆ, ಅವರ ಮಗ ಅದಿತ್ಯ ಸಂಸ್ಥೆಯ ಸಿಇಒ ಆಗಿದ್ದಾರೆ.

ಎರಡು ತಿಂಗಳ ಹಿಂದೆ ಅಮೆರಿಕ ಮೂಲದ ಹೂಡಿಕೆದಾರ ಕಾಲ್ ಸೋಮಾನಿ ಅವರು ರಾಜಸ್ಥಾನದ ಫ್ರಾಂಚೈಸಿಯಲ್ಲಿ ಶೇ.100ರಷ್ಟು ಪಾಲನ್ನು 16,290 ಕೋಟಿ ರೂ.ಗೆ ಖರೀದಿಸಲು ಯೋಜಿಸಿ ಬಿಡ್ ಸಲ್ಲಿಸಿದ್ದರು. ಆದರೆ ಆ ಒಪ್ಪಂದ ಪೂರ್ಣಗೊಳ್ಳದ ಕಾರಣ ಮಿತ್ತಲ್ ಕುಟುಂಬ, ಪೂನಾವಾಲಾ ಅವರು ಈಗಾಗಲೇ ರಾಯಲ್ಸ್‌ನ ಸಹ ಮಾಲಕರಾಗಿರುವ ಮನೋಜ್ ಬದಾಲೆ ಅವರೊಂದಿಗೆ ತಂಡವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries