ಕಾಸರಗೋಡು: ಬಡಗು ಶಬರಿಮಲೆ ಎಂದೇ ಖ್ಯಾತಿ ಪಡೆದಿರುವ ಕುಂಬ್ಡಾಜೆ ಪಂಚಾಯಿತಿಯ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನಲ್ಲಿ ಹಿತ್ತಾಳೆ ಕವಚ ಅಳವಡಿಸಿದ 18 ಮೆಟ್ಟಿಲುಗಳ ಲೋಕಾರ್ಪಣೆ, ಶ್ರೀ ದೇವರ ಭವ್ಯ ಮಹೋತ್ಸವ ಮೇ 11ರಂದು ಸಂಜೆ 5ಕ್ಕೆ ನಡೆಯಲಿರುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಕಿರಣ್‍ಕುಮಾರ್ ಕುಣಿಕುಳ್ಳಾಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರಾದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಕರಕರಮಲಸಂಜಾತ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು ಹಿತ್ತಾಳೆ ಅಳವಡಿಸಿದ ಹದಿನೆಂಟು ಮೆಟ್ಟಿಲುಗಳ ಲೋಕಾರ್ಪಣೆ ನಡೆಸಿ, ಆಶೀರ್ವಚನ ನೀಡುವರು. ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಾಧಿಶರಾದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಖಾರ್ಯಕ್ರಮ ನಡೆಯುವುದು. 101 ಚೆಂಡೆಗಳ ಭವ್ಯ ವಾದ್ಯಘೋಷಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ.
ದೇವಸ್ಥಾನದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ, ಶ್ರೀ ಕ್ಷೇತ್ರದ ಗೌರವ ಸಲಹೆಗಾರ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಶಬರಿಮಲೆ ಪಂದಲಂ ಅರಮನೆಯ ನಾರಾಯಣ ವರ್ಮ, ಶ್ರೀ ಕ್ಷೇತ್ರದ ದೈವಜ್ಞರಾದ ಕೆ. ಸಿ. ನಾಗೇಂದ್ರ ಭಾರದ್ವಾಜ್, ಸುರತ್ಕಲ್ ಹಿರಿಯ ಗುರು ಸ್ವಾಮಿ ರಾಮಗುರು ಸ್ವಾಮಿ ಉದಯಗಿರಿ, ದಾನಿಗಳಾದ ತಾಳಿಪ್ಪಾಡಿ ಜಾಹ್ನವಿ ಶಾಸ್ತ್ರಿ, ಬೆಂಗಳೂರು ಪಶ್ಚಿಮ ಧಾರವಾಡದ 'ಹೆಸ್ಕಾಂ' ತಾಂತ್ರಿಕ ನಿರ್ದೇಶಕ ಜಗದೀಶ್ ಎಸ್, ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ. ಕಿಶೋರ್ ಕುಮಾರ್ ಕುಣಿಕುಳ್ಳಾಯ ಪಲ್ಗೊಳ್ಳುವರು. ಸಂಜೆ 6.30ಕ್ಕೆ 18 ಮೆಟ್ಟಿಲುಗಳ ದ್ವಾರ ಪೂಜೆ ಹಾಗೂ ಲೋಕಾರ್ಪಣೆ, ರಾತ್ರಿ 8ಕ್ಕೆ ಶ್ರೀ ದೇವರ ಭವ್ಯ ಮಹೋತ್ಸವ ನಡೆಯುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಹರಿನಾರಾಯಣ ಮಾಸ್ತರ್, ಪ್ರಚಾರ ಸಮಿತಿ ಅಧ್ಯಕ್ಷ ರಾಜೇಶ್ ಮಾಸ್ಟರ್ ಅಗಲ್ಪಾಡಿ, ಗೋವಿಂದ ರಾಜ್ ಮೈಲ್ತೊಟ್ಟಿ ಉಪಸ್ಥಿತರಿದ್ದರು.

.jpg)
.jpg)
