ಪೆರ್ಲ: ಶೇಣಿ ತರವಾಡು ಮನೆ ಗೃಹಪ್ರವೇಶ ಶ್ರೀ ಉಳ್ಳಾಕ್ಲು, ಧರ್ಮದೈವ ಚೆಂಬರಕಾನತ್ತಾಯ, ಧೂಮಾವತಿ, ರಕ್ಷೇಶ್ವರಿ, ಸಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ, ಶ್ರೀದೈವಗಳ ನೇಮ ಮೇ 9ರಿಂದ 11ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಕುಂಟಾರು ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿಗಳ ಮಾರ್ಗದರ್ಶನ ಹಾಗೂ ಕುಂಟಾರು ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವುದು.
9ರಂದು ಸಂಜೆ 3ಕ್ಕೆ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ(ಉಳ್ಳಾಲ್ತಿ) ದೇವಸ್ಥಾನದಿಂದ ಶೇಣಿ ತರವಾಡುಮನೆಗೆ ಸಂಭ್ರಮದ ಶೋಭಾಯಾಥ್ರೆಯೊಂದಿಗೆ ಹಸಿರುವಾಣಿ ಸಮರ್ಪಣಾ ಮೆರವಣಿಗೆ ನಡೆಯುವುದು. ಸಂಜೆ 4.30ಕ್ಕೆ ಉಗ್ರಾಣ ತುಂಬಿಸುವ ಕರ್ಯಕ್ರಮ ನಡೆಯುವುದು. 5ಕ್ಕೆ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ, 5.30ಕ್ಕೆ ಧಾರ್ಮಿಕ ಸಭೆ ನಡೆಯುವುದು. ಪರಮಪೂಜ್ಯ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ ಟೀಚರ್ ಅಧ್ಯಕ್ಷತೆ ವಹಿಸುವರು.
ನಂತರ ವಿವಿಧ ವೈದಿಕ ಕಾರ್ಯಖ್ರಮ, ಭಜನೆ ನಡೆಯುವುದು. 10ರಂದು ಬೆಳಗ್ಗೆ 6ಕ್ಕೆ ಗಣಪತಿ ಹವನ, ಬೆಳಗ್ಗೆ 7:29ರ ವೃಷಭಲಗ್ನ ಶುಭ ಮುಹೂರ್ತದಲ್ಲಿ ತರವಾಡು ಮನೆಯ ಗೃಹಪ್ರವೇಶ, ಗಣಪತಿ ಹವನ, ಶ್ರೀ ಸತ್ಯನಾರಾಯಣ ಪೂಜೆ, ಹರಿಸೇವೆ ನಡೆಯುವುದು. 7:48 ರಿಂದ 8:29ರ ವೃಷಭಲಗ್ನ ಶುಭ ಮುಹೂರ್ತದಲ್ಲಿ ಶ್ರೀ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ ನಡೆಯುವುದು.
ಮಧ್ಯಾಹ್ನ 12ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಆಶೀರ್ವಚನ ನೀಡುವರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧಾರ್ಮಿಕ ಭಾಷಣ ಮಾಡುವರು. ಸಿ. ಎ. ಸುದೀರ್‍ಕುಮಾರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆ ವಹಿಸುವರು. ಸಂಜೆ 5ಕ್ಕೆ ಉಳ್ಳಾಕ್ಲು ದೈವಗಳ ಭಂಡಾರ ತೆಗೆಯುವುದು, 7ಕ್ಕೆ ಉಳ್ಳಾಕ್ಲು ದೈವದ ನೇಮ, ರಾತ್ರಿ 10ಕ್ಕೆ ಹೊಸಮ್ಮ ದೈವದ ನೇಮ
11ರಂದು ಬೆಳಗ್ಗೆ 5ಕ್ಕೆ ಧೂಮಾವತಿ ದೈವದ ನೇಮ, 11ಕ್ಕೆ ಧರ್ಮದೈವ ಚೆಂಬರಕಾನತ್ತಾಯ ದೈವದ ನೇಮ, ಸಂಜೆ 3ಕ್ಕೆ ಪಂಜುರ್ಲಿ ದೈವದ ನೇಮ, ಕುರವ-ಕೊರತಿ ದೈವದ ನೇಮ, 5ಕ್ಕೆ ಕೊರತ್ತಿ ದೈವದ ನೇಮ, 7ಕ್ಕೆ ರಕ್ಷೇಶ್ವರಿ ದೈವದ ನೇಮ, ರಾತ್ರಿ 10ಕ್ಕೆ ಗುಳಿಗ ದೈವದ ನೇಮ ನಡೆಯುವುದು.



