HEALTH TIPS

ಅತಿಯಾದ ಶಬ್ದದೊಂದಿಗೆ ಭೀತಿ ಸೃಷ್ಟಿಸಿದ ಕಾರು-ಇಬ್ಬರ ಬಂಧನ, ಕಾರು ವಶಕ್ಕೆ

ಮಂಜೇಶ್ವರ: ಕಾರಿಗೆ ಒಂದಕ್ಕಿಂತ ಹೆಚ್ಚಿನ ಸೈಲೆನ್ಸರ್ ಅಳವಡಿಸಿ ಅತಿಯಾದ ಶಬ್ದ ಸಹಿತ ಬೆಂಕಿ, ಹೊಗೆ ಸೃಷ್ಟಿಸುತ್ತಾ ಸಂಚರಿಸಿ ಜನರಲ್ಲಿ ಭೀತಿ ಹುಟ್ಟಿಸುವುದರ ಜತೆಗೆ ಈ ದೃಶ್ಯವನ್ನು ಇನ್‍ಸ್ಟಾಗ್ರಾಂನಲ್ಲಿ ಪ್ರಚಾರ ಮಾಡಿದ ಇಬ್ಬರ ವಿರುದ್ಧ ಮಂಜೇಶ್ವರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  

ಕಂಚಿಲ ಚಾರ್ಲ ನಿವಾಸಿ ಅಹಮ್ಮದ್ ಜಿಲಾಲ್ (19), ಬಂಬ್ರಾಣ ನಂಬೇಡಿ ಹೌಸ್‍ನ ಹಸೈನಾರ್ (22) ಎಂಬಿವರ ವಿರುದ್ಧ ಈ ಕೇಸು ದಾಖಲಿಸಲಾಗಿದೆ. ಮೇ 5ರಂದು ಉಪ್ಪಳ ಪೆಟ್ರೋಲ್ ಬಂಕ್ ಹಾಗೂ ಪರಿಸರದ ರಸ್ತೆಯಲ್ಲಿ ನಂಬರ್‍ಪ್ಲೇಟ್ ಇಲ್ಲದ ಕಾರಿನಲ್ಲಿ ಅತಿಯಾದ ಶಬ್ದದೊಂದಿಗೆ ಸಂಚರಿಸುತ್ತಾ ಕಾರಿನ ತಳಭಾಗದಿಂದ ಹೊಗೆ ಹಾಗೂ ಬೆಂಕಿ ಕೆನ್ನಾಲಿಗೆ ಹೊರಸೂಸುವ ರೀತಿಯಲ್ಲಿ ಜನರಲ್ಲಿ ಭೀತಿ ಸೃಷ್ಟಿಸಿರುವುದಲ್ಲದೆ, ಇತರರು ಈ ದೃಶ್ಯಗಳನ್ನು ಚಿತ್ರೀಕರಿಸಿ ಇನ್‍ಸ್ಟಾ ಗ್ರಾನಲ್ಲಿ ಪ್ರಚಾರ ಮಾಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಕಾರನ್ನು ವಶಕ್ಕೆ ತೆಗೆದು, ಇಬ್ಬರನ್ನು ಬಂಧಿಸಿದ್ದಾರೆ.



  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries