ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಂಗಡಿಯ ವಸತಿಗೃಹವೊಂದಕ್ಕೆ ಅತಿಕ್ರಮಿಸಿ ನುಗ್ಗಿ ಮಹಿಳೆಯೊಂದಿಗೆ ಯುವಕನ ಅರೆನಗ್ನ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಪಡಿಸುವ ಬೆದರಿಕೆಯೊಡ್ಡಿ, ಅವರಿಂದ ಹಣ ಹಾಗೂ ಮೊಬೈಲ್ ಅಪಹರಿಸಿರುವ ಪ್ರಕರಣದ ಆರೋಪಿ ಕುಂಜತ್ತೂರಿನ ಪಿ.ಎಂ. ಅಬೂಬಕ್ಕರ್ (40)ಎಂಬಾತನನ್ನು ಮಂಗಳೂರಿನಿಂದ ಮಂಜೇಶ್ವರ ಠಾಣೆ ಪೆÇಲೀಸರು ಬಂಧಿಸಿದ್ದಾರೆ.ಮಂಜೇಶ್ವರ ಪೆÇಲೀಸ್ ಇನ್ಸ್‍ಪೆಕ್ಟರ್ ಜಿಜೇಶ್‍ರ ನೇತೃತ್ವದಲ್ಲಿ ಎಸ್‍ಐ ವೈಷ್ಣವ್, ಎಎಸ್‍ಐ ಫಿಲಿಪ್ ಥೋಮಸ್, ಸಂದೀಪ್ ನೇತೃತ್ವದಲ್ಲಿ ಕಾರ್ಯಾಚಣೆ ನಡೆಸಲಾಗಿದೆ.
2026 ಜನವರಿ 14ರಂದು ಹೊಸಂಗಡಿ ಪೇಟೆಯ ವಸತಿಗೃಹವೊಂದರಲ್ಲಿ ಘಟನೆ ನಡೆದಿದೆ. ಉಳ್ಳಾಲ ಮೋಂಟುಗುಳಿ ನಿವಾಸಿ ಮಹಮ್ಮದ್ ಹನೀಫ್ ಅವರದೂರಿನ ಮೇರೆಗೆ ಅಂದು ಕೇಸುದಾಖಲಿಸಿಕೊಂಡಿದ್ದರು. ಯುವತಿ ಹಾಗೂ ಈಕೆಯ ಗೆಳೆಯ ವಸತಿಗೃಹದ 206ನೇ ನಂಬ್ರ ಕೊಠಡಿಯಲ್ಲಿದ್ದರು. ಈ ಸಂದರ್ಭ ಕೊಠಡಿಗೆ ತಲುಪಿದ ಐದು ಮಂದಿಯ ತಂಡ ಜೋಡಿಯನ್ನು ಬೆದರಿಸಿ ಇಬ್ಬರನ್ನೂ ಅರೆನಗ್ನರನ್ನಾಗಿಸಿ, ಜತೆಯಗಿ ನಿಲ್ಲಿಸಿ ಮೊಬೈಲ್ ಫೆÇೀನ್ ಕ್ಯಾಮರಾದಲ್ಲಿ ಫೆÇೀಟೋ ಹಾಗೂ ವೀಡಿಯೋ ದಾಖಲಿಸಿಕೊಮಡಿದ್ದರು. ಅಲ್ಲದೆ ಅವರ ವಶದಲ್ಲಿದ್ದ ನಗದು ಹಾಗೂ ಮೊಬೈಲ್ ದೋಚಿ, 2ಲಕ್ಷ ರೂ. ನಗದಿಗೆ ಬೇಡಿಕೆಯಿರಿಸಿ ಪರಾರಿಯಾಗಿರುವ ಬಗ್ಗೆ ದೂರು ನೀಡಲಾಗಿತ್ತು.
ಪ್ರಕರಣದ ಇತರ ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿದೆ.

