ಕಾಸರಗೋಡು: ಬಂದಡ್ಕದಲ್ಲಿ ಮನೆಯ ಅಡುಗೆ ಕೊಠಡಿಯೊಳಗೆ ಸೇರಿಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ತಿಯಂತೆ ಬೋವಿಕ್ಕಾನದ ಅರಣ್ಯ ಇಲಾಖೆಯ ರ್ಯಾಪಿಡ್ ರೆಸ್ಪೋನ್ಸ್ ಟೀಂ ಸೆರೆಹಿಡಿದು ಸುರಕ್ಷಿತವಾಗಿ ಕಾಡಿಬೆ ಬಿಟ್ಟಿದೆ.
ಬಂದಡ್ಕ ಸಮೀಪದ ಮಾಣಿಮೂಲೆ ನಿವಾಸಿ ಪಿ.ಕೆ. ಬಾಲಕೃಷ್ಣನ್ ಎಂಬವರ ಮನೆಯ ಅಡುಗೆ ಕೋಣೆಯ ಒಲೆ ಬಳಿ ಇರಿಸಲಾಗಿದ್ದ ಪಾತ್ರೆಗಳ ಸಂದಿಯಲ್ಲಿ ಕಾಳಿಂಗ ಸರ್ಪ ಆವಿತುಕೊಂಡಿತ್ತು. ಅಡುಗೆ ಕೋಣೆಯ ಬಾಗಿಲು ತೆರೆದಿಟ್ಟ ಸಂದರ್ಭ ಕಾಳಿಂಗ ಸರ್ಪ ಕೋಣೆಯೊಳಗೆ ಪ್ರವೇಶಿಸಿರಬೇಕೆಂದು ಸಂಶಯಿಸಲಾಗಿದೆ. ಮನೆಯವರು ಅಡುಗೆ ತಯಾರಿಸಲು ಒಲೆ ಬಳಿ ಬಂದಾಗ ಬೃಹತ್ ಕಾಳಿಂಗಸರ್ಪ ಪತ್ತೆಯಾಗಿದೆ. ಮನೆಯವರು ತಕ್ಷಣ ನೀಡಿದ ಮಾಹಿತಿಯನ್ವಯ ಬೋವಿಕ್ಕಾನದ ಅರಣ್ಯ ಇಲಾಖೆಯ ರ್ಯಾಪಿಡ್ ರೆಸ್ಪೋನ್ಸ್ ಟೀಮ್‍ನ ಸದಸ್ಯರು ಸ್ಥಳಕ್ಕಾಗಮಿಸಿ ಕಾಳಿಂಗ ಸರ್ಪವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾಳಿಂಗಸರ್ಪ ಸುಮಾರು ಎಂಟು ಅಡಿ ಉದ್ದ ಹಾಗೂ 16ಕಿ.ಗ್ರಾಂ ಭಾರ ಹೊಂದಿತ್ತು.

