ಕುಂಬಳೆ: ಹದಿನಾರು ಮತ್ತು ಹತ್ತರ ಹರೆಯದ ಇಬ್ಬರು ಮಲಮಕ್ಕಳಾದ ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮಕ್ಕಳ ಮಲತಂದೆ ಕಣ್ಣೂರು ಪಾಪಿನಿಶ್ಶೇರಿ ನಿವಾಸಿ ಪ್ರಸಕ್ತ ಕುಂಬಳೆ ಪೆÇಲೀಸ್ ಠಾಣೆ ವ್ಯಾಪ್ತಿಯ ಕ್ವಾಟ್ರಸ್‍ನಲ್ಲಿ ವಾಸಿಸುವ ಮಧ್ಯವಯಸ್ಕನನ್ನು ಬಂಧಿಸಿರುವ ಕುಂಬಳೆ ಠಾಣೆ ಪೊಲೀಸರರು, ಈತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.
2024 ಸೆಪ್ಟಂಬರ್ ತಿಂಗಳಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿ ಬಾಲಕಿಯರು ನೀಡಿದ ದೂರಿನಂತೆ ಮಲತಂದೆ ವಿರುದ್ಧ ಎರಡು ಪೆÇೀಕ್ಸೊ ಕೇಸು ದಾಖಲಿಸಿಕೊಳ್ಳಲಾಗಿದೆ. ಈ ಬಾಲಕಿಯರು ಬೋರ್ಡಿಂಗ್ ಶಾಲೆಯಲ್ಲಿ ಕಲಿಯುತ್ತಿದ್ದು, ಓಣಂ ರಜೆಯಲ್ಲಿ ತಾಯಿಯ ಕ್ವಾಟರ್ಸ್‍ಗೆ ತಲುಪಿದಾಗ ಕಿರುಕುಳ ನೀಡಿರುವ ಬಗ್ಗೆ ಪೆÇಲೀಸರಿಗೆ ದೂರು ನೀಡಲಾಗಿತ್ತು.

