HEALTH TIPS

ಭಾರತದ ಸೇನಾ ಶಕ್ತಿಗೆ ಮತ್ತಷ್ಟು ಬಲ: ₹19 ಸಾವಿರ ಕೋಟಿ ಡೀಲ್‌ಗೆ ಸೈ ಎಂದ ಅಮೆರಿಕ

 ವಾಷಿಂಗ್ಟನ್: ಇರಾನ್-ಇಸ್ರೇಲ್ ಯುದ್ಧದ ಒತ್ತಡದ ನಡುವೆಯೇ ಅಮೆರಿಕವು ಭಾರತಕ್ಕೆ ಸಿಹಿ ಸುದ್ದಿ ನೀಡಿದೆ.


ಭಾರತೀಯ ವಾಯು ಸೇನೆ ಹಾಗೂ ಭೂ ಸೇನೆ ಬಳಿ ಇರುವ ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್‌ಗಳಿಗೆ ಬೆಂಬಲಿತ ಸೇವೆಗಳನ್ನು ನೀಡಲು ಹಾಗೂ ಹೆಲಿಕಾಪ್ಟರ್‌ಗಳಲ್ಲೂ ಸಾಗಿಸುವಷ್ಟು ಹಗುರವಾಗಿರುವ ಅತ್ಯಾಧುನಿಕ ಹೊವಿಟ್ಜರ್‌ (ಫಿರಂಗಿ)ಗಳನ್ನು ನೀಡಲು ಅಮೆರಿಕ ಸರ್ಕಾರ ಅನುಮೋದನೆ ನೀಡಿದೆ ಎಂದು ಅಲ್ಲಿನ ವಿದೇಶಾಂಗ ಇಲಾಖೆ ತಿಳಿಸಿದೆ.

ಈ ಹೊಸ ಒಪ್ಪಂದವು ಸುಮಾರು ₹19 ಸಾವಿರ ಕೋಟಿಯ ಮೊತ್ತದ್ದಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಈಗಾಗಲೇ ಭಾರತದ ವಿವಿಧ ಸೇನೆಗಳಲ್ಲಿ 28 ಅಪಾಚೆ ಹೆಲಿಕಾಪ್ಟರ್‌ಗಳಿವೆ. ಇವುಗಳಿಗೆ ನಿರಂತರವಾಗಿ ಬೆಂಬಲಿತ ಸೇವೆಗಳನ್ನು, ಸಲಕರಣೆಗಳನ್ನು ನೀಡಲು ಈ ಅನುಮೋದನೆ ಅನುಕೂಲ ಮಾಡಿಕೊಡುತ್ತದೆ. ಹಾಗೆಯೇ ಸೇನೆಗೆ ಒ777ಂ2 Uಟಣಡಿಚಿ-ಐighಣ ಹೊವಿಟ್ಜರ್‌ಗಳು ಸುಲಭವಾಗಿ ಸಿಗಲಿವೆ.

ಈ ಒಪ್ಪಂದದ ‍ಪ್ರಕಾರ ಅಪಾಚೆ ಹೆಲಿಕಾಪ್ಟರ್‌ಗಳಿಗೆ ಪೂರಕ ವಸ್ತುಗಳು, ಬಿಡಿಭಾಗಗಳು, ದುರಸ್ತಿ ಮತ್ತು ರಿಟರ್ನ್‌ ಸೇವೆ, ತರಬೇತಿ, ತಾಂತ್ರಿಕ ನೆರವು, ಕಂಪನಿಯ ಸೇವಾ ಪ್ರತಿನಿಧಿ, ಡಿಪೋ ಸಾಮರ್ಥ್ಯ, ಲಾಜಿಸ್ಟಿಕ್ಸ್ ಸೇವೆ ಇನ್ನಿತರ ಅತ್ಯಾಧುನಿಕ ಸೇವೆಗಳು ಸಿಗಲಿವೆ.

ವಿಶ್ವದ ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್‌ಗಳಾಗಿರುವ ಎಎಚ್‌- 64 ಅಪಾಚೆ ಹೆಲಿಕಾಪ್ಟರ್‌ಗಳನ್ನು ಅಮೆರಿಕ ಸೈನ್ಯವು ಬಳಸುತ್ತಿದ್ದು, ಈಗ ಇವು ಭಾರತೀಯ ಸೈನ್ಯದ ಕಾರ್ಯಾಚರಣೆಯ ಸಾಮರ್ಥ್ಯ ವನ್ನು ಗಣನೀಯವಾಗಿ ಹೆಚ್ಚಿಸಲಿವೆ. ಅಲ್ಟ್ರಾ ಲೈಟ್ ಹೊವಿಟ್ಜರ್‌ಗಳು ಮತ್ತು ಅಪಾಚೆ ಸೇವೆಗಳಿಂದ ಭಾರತದ ಸೇನಾ ಶಕ್ತಿ ಮತ್ತಷ್ಟು ಹೆಚ್ಚಾಗಲಿದೆ ಎಂಬುದನ್ನು ಪಿಟಿಐ ವರದಿ ಮಾಡಿದೆ.

ಭಾರತದ ರಕ್ಷಣಾ ಇಲಾಖೆ ಮತ್ತು ಅಮೆರಿಕದ ಬೋಯಿಂಗ್‌ ಕಂಪನಿಯು 2020ರಲ್ಲಿ ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದ್ದವು. ಒಂದು ಅಪಾಚೆ ಹೆಲಿಕಾಪ್ಟರ್‌ ಬೆಲೆ ಸಾವಿರ ಕೋಟಿ ರೂಪಾಯಿಗೂ ಅಧಿಕ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries