HEALTH TIPS

2023ರ ತಾನೂರ್ ದೋಣಿ ದುರಂತ: ಅಂತಿಮ ವರದಿ ಸಲ್ಲಿಕೆ

ಕೊಚ್ಚಿ: 2023ರ ಮಲಪ್ಪುರಂ ಜಿಲ್ಲೆಯ ತಾನೂರ್‌ ದೋಣಿ ದುರಂತದ ತನಿಖೆಗಾಗಿ ರಚಿಸಲಾದ ನ್ಯಾಯಮೂರ್ತಿ ವಿ.ಕೆ.ಮೋಹನನ್ ವಿಚಾರಣಾ ಆಯೋಗವು ತನ್ನ ವಿಚಾರಣೆಯನ್ನು ಪೂರ್ಣಗೊಳಿಸಿ, ಅಂತಿಮ ವರದಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಲ್ಲಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ನ್ಯಾಯಮೂರ್ತಿ ವಿ.ಕೆ.ಮೋಹನನ್ ತಾಂತ್ರಿಕ ತಜ್ಞರಾದ ಎಸ್.ಸುರೇಶ್ ಕುಮಾರ್ ಮತ್ತು ಕೆ.ಪಿ.ನಾಯಾಯಣನ್ ಅವರೊಂದಿಗೆ ಏಪ್ರಿಲ್ 30ರಂದು ಮುಖ್ಯಮಂತ್ರಿಯವರಿಗೆ ಅವರ ಕಚೇರಿಯಲ್ಲಿ 14 ಸಂಪುಟಗಳ ಅಂತಿಮ ವರದಿಯನ್ನು ಹಸ್ತಾಂತರಿಸಲಾಗಿದೆ ಎಂದು ಆಯೋಗದ ಕಚೇರಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಹೇಳಿದೆ.

2023ರ ಮೇ 7ರಂದು ತಾನೂರ್‌ನ ಪೊರಪ್ಪುಳ ಸಂಗಮದ ಬಳಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದ ಪರಿಣಾಮ 15 ಮಕ್ಕಳು, ಐವರು ಮಹಿಳೆಯರು ಸೇರಿ 22 ಜನರು ಮೃತಪಟ್ಟಿದ್ದರು. ಈ ದುರಂತದ ತನಿಖೆಗಾಗಿ ರಚಿಸಲಾದ ಆಯೋಗವು, ನಿಯಮದಂತೆ ಎರಡು ಹಂತಗಳಲ್ಲಿ ವಿಚಾರಣೆ ನಡೆಸಿ ವರದಿ ಸಲ್ಲಿಸಿದೆ.

2025ರ ಡಿಸೆಂಬರ್ 4ರಂದು ಸಲ್ಲಿಸಲಾದ ಮೊದಲ ಹಂತದ ವರದಿಯು, ಅಪಘಾತಕ್ಕೆ ತಕ್ಷಣದ ಕಾರಣಗಳನ್ನು ಪರಿಶೀಲಿಸಿ, ಅದಕ್ಕೆ ಕಾರಣರಾದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಿತು. ಈ ಹಂತದ ಭಾಗವಾಗಿ ಆಯೋಗವು 18 ತಿಂಗಳುಗಳ ಕಾಲ ತಿರೂರ್‌ನಲ್ಲಿ ಸಭೆ ನಡೆಸಿ 51 ಸಾಕ್ಷಿಗಳು ಮತ್ತು 91 ದಾಖಲೆಗಳನ್ನು ಪರಿಶೀಲಿಸಿತ್ತು.

141 ಶಿಫಾರಸುಗಳ ವರದಿ ಸಲ್ಲಿಕೆ

2026 ಏಪ್ರಿಲ್ 30ರಂದು ಸಲ್ಲಿಸಲಾದ ಎರಡನೇ ಮತ್ತು ಅಂತಿಮ ಹಂತದ ವರದಿಯು ಅಸ್ತಿತ್ವದಲ್ಲಿರುವ ಪರವಾನಗಿ ಮತ್ತು ಜಾರಿ ಕಾರ್ಯ ವಿಧಾನಗಳ ಸಮರ್ಪಕತೆ ಭವಿಷ್ಯದ ಸುರಕ್ಷತಾ ಕ್ರಮಗಳು ಮತ್ತು ರಾಜ್ಯದಲ್ಲಿ ಈ ಹಿಂದೆ ನಡೆದಿದ್ದ ದೋಣಿ ದುರಂತಗಳ ನಂತರ ತೆಗೆದುಕೊಂಡ ಕ್ರಮಗಳ ಪರಿಶೀಲನೆ ಸೇರಿದಂತ ವ್ಯವಸ್ಥಿತವಾಗಿ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದೆ. ಅಂತಿಮ ಹಂತದ ವರದಿಗಾಗಿ ಆಯೋಗವು ರಾಜ್ಯದ ಎಲ್ಲಾ 14 ಜಿಲ್ಲೆಗಳಲ್ಲಿ 21 ಸಾರ್ವಜನಿಕ ಸಮಾಲೋಚನಾ ಸಭೆಗಳನ್ನು ನಡೆಸಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಸೇರಿದಂತೆ 821 ವ್ಯಕ್ತಿಗಳಿಂದ ಹೇಳಿಕೆಗಳನ್ನು ದಾಖಲಿಸಿದೆ. ವರದಿಯು ವಿಪತ್ತುಗಳು ಮರುಕಳಿಸದಂತೆ ತಡೆಯಲು ಜಲ ಸಾರಿಗೆ ಸುರಕ್ಷತೆ ಮತ್ತು ಪರವಾನಗಿ ಶಿಷ್ಟಾಚಾರಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಗುರಿಯನ್ನು ಹೊಂದಿರುವ 141 ಶಿಫಾರಸುಗಳನ್ನು ಒಳಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries