HEALTH TIPS

24 ರಂದು ಕಿವಿಯ ಶ್ರವಣ ತಪಾಸಣೆ, ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ

ಉಪ್ಪಳ: ವಿಶ್ವ ಹಿಂದೂ ಪರಿಷತ್ ಉಪಖಂಡ ಸಮಿತಿ ಕೋಡಿಬೈಲ್ ಹಾಗೂ  ಓಂ ಶಕ್ತಿ ಫ್ರೆಂಡ್ಸ್ ಕೋಡಿಬೈಲ್ ಆಶ್ರಯದಲ್ಲಿ ಟೀಮ್ ಈಶ್ವರ ಮಲ್ಪೆ ಸಹಯೋಗದೊಂದಿಗೆ ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಕಿವಿಯ ಶ್ರವಣಶಕ್ತಿ ಉಚಿತ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮ ಮೇ 24ರಂದು ಬೆಳಗ್ಗೆ 9.30ಕ್ಕೆ ಕೋಡಿಬೈಲ್ ನವೋದಯ ಎಎಲ್ ಪಿ ಶಾಲೆಯಲ್ಲಿ ನಡೆಯಲಿದೆ. 

ಟೀಮ್ ಈಶ್ವರ್ ಮಲ್ಪೆ ಶ್ರವಣ ಯಂತ್ರದ ಶೇ.40ರಷ್ಟು ಮೊತ್ತ ಪಾವತಿಸಲಿದೆ.  ನೋಂದಣಿ ಕಡ್ಡಾಯವಾಗಿದ್ದು ಮೊದಲು ನೋಂದಾಯಿಸುವ 30 ಮಂದಿ ಈ ಸೌಲಭ್ಯ ಪಡೆದುಕೊಳ್ಳಲು ಅರ್ಹರಾಗಿರುತ್ತರೆ.   ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಹೊಂದಿದ ವೈದ್ಯರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿರಿಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಶ್ರವಣ ಪರೀಕ್ಷೆಯ ಯಾವುದಾದರೂ ಹಳೇ ವರದಿಗಳಿದ್ದಲ್ಲಿ ತಮ್ಮ ವಶದಲ್ಲಿರಿಸಿಕೊಳ್ಳಬೇಕು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ (8951804399) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries