HEALTH TIPS

ಎಕ್ಸಿಟ್​ ಪೋಲ್​ ಬುಡಮೇಲಾಗುತ್ತೆ: ಮೇ. 4 ಕ್ಕೆ ಸರ್ಕಾರ ರಚನೆಯಾಗುತ್ತೆ; ದೀದಿ ವಿಡಿಯೋ ಸಂದೇಶ!

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತದಾನ ಮುಗಿದ್ದಿದ್ದು, ಮೇ. 4ರಂದು ಫಲಿತಾಂಶ ಹೊರಬೀಳಲಿದೆ. ಈದೀಗ ಮತದಾನದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ಮೇಲೆ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಎಕ್ಸಿಟ್​ ಪೋಲ್​ಗಳು ಬಿಜೆಪಿ ಕಚೇರಿಗಳು!

ನಿನ್ನೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಫಲಿತಾಂಶ ಏನಾಗಬಹುದೆಂಬ ಎಕ್ಸಿಟ್​ ಪೋಲ್ ಬಿಡುಗಡೆಯಾಗುವುದು ಸಹಜ. ಆದರೆ ಬಹುತೇಕ ಎಕ್ಸಿಟ್​ ಪೋಲ್​ಗಳು ಈ ಭಾರಿ ಬಿಜೆಪಿಗೆ ಬಹುಮತ ಬರುತ್ತದೆ ಎಂದು ಹೇಳಿರುವುದು ದೀದಿ ಕೋಪಕ್ಕೆ ಕಾರಣವಾಗಿದ್ದು, ಈ ಎಕ್ಸಿಟ್​ ಪೋಲ್​ಗಳು ನಿಖರವಾದ ಫಲಿತಾಂಶದ ಮಾಹಿತಿಯನ್ನು ನೀಡಿಲ್ಲ. ಅವು ಬಿಜೆಪಿ ಕಚೇರಿಯ ರೀತಿ ಕೆಲಸಮಾಡಿವೆ, ಮೇ. 4 ರಂದು ಜನಾಭಿಪ್ರಾಯ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ. ನಮ್ಮದೇ ಬಹುಮತ ಖಚಿತ: ಮಮತಾ
ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಮಮತಾ ಬ್ಯಾನರ್ಜಿ, ಈ ಭಾರಿ ಚುನಾವಣೆಯಲ್ಲಿ ನಮಗೆ ಕೇಂದ್ರ ಸರ್ಕಾರ ಎಷ್ಟೇ ತೊಂದರೆ ಕೊಟ್ಟರೂ ಬಂಗಾಲಿಗಳು ನಮ್ಮ ಕೈ ಹಿಡಿದೇ ಹಿಡಿಯುತ್ತಾರೆ. ಈ ಸಲ ನಾವು ಸುಮಾರು 226 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸುವ ಮೂಲಕ ಮತ್ತೆ ಸರ್ಕಾರವನ್ನು ರಚಿಸಲಿದ್ದೆವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲೇ ಹೆರಿಗೆ: ವೈದ್ಯರ ಸಮಯ ಪ್ರಜ್ಞೆಗೆ ನೆಟ್ಟಿಗರ ಸಲಾಂ! ವಿಡಿಯೋ ವೈರಲ್​.. Viral Video ಆದರೆ ಈ ಭಾರಿ ಬಿಜೆಪಿ ಬಂಗಾಳವನ್ನು ಗೆಲ್ಲಲ್ಲು ಏನು ಮಾಡಲು ಸಿದ್ದವಿದೆ, ಆದ್ದರಿಂದ ಮತ ಏಣಿಕೆ ದಿನ ನಾನು ಖುದ್ದಾಗಿ ಪ್ರತಿ ಕ್ಷೇತ್ರಗಳಿಗೆ ತೆರಳುವ ಯೋಜನೆ ಹೊಂದಿದ್ದೆನೆ. ನನಗೆ ನನ್ನ ಮತದಾರರ ಮೇಲೆ ನಂಬಿಕೆಯಿದೆ. ಮೇ.4 ರಂದು ಟಿಎಮ್​ಸಿ ಈ ನೆಲದ ಸರ್ಕಾರವನ್ನು ರಚಿಸುವುದು ನಿಶ್ಚಿತ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಸಮೀಕ್ಷೆಗಳ ಲೆಕ್ಕಾಚಾರ: ಯಾರಿಗೆ ಎಷ್ಟು ಸ್ಥಾನ..?

ಬಂಗಾಳದ 294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 148 ಸ್ಥಾನಗಳ ಅಗತ್ಯವಿದೆ. ಪ್ರಮುಖ ನಾಲ್ಕು ಸಮೀಕ್ಷೆಗಳಲ್ಲಿ ಮೂರು ಸಂಸ್ಥೆಗಳು ಬಿಜೆಪಿಯೇ ಅಧಿಕಾರ ಹಿಡಿಯಲಿದೆ ಎಂದು ಹೇಳಿವೆ.ಸಮೀಕ್ಷಾ ಸಂಸ್ಥೆ ಬಿಜೆಪಿ (BJP+) ತೃಣಮೂಲ ಕಾಂಗ್ರೆಸ್ (TMC) ಇತರರು P-Marq 150 - 175 118 - 138 00 - 05ಮತ್ತೆರಡು ಸಮೀಕ್ಷೆಗಳು 146 - 165 120 - 135 02 - 06People's Pulse 100 - 115 177 - 187 01 - 04

2021 ಬಂಗಾಳ ಚುನಾವಣೆ!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಸಮೀಕ್ಷೆಗಳು ಬಿಜೆಪಿ ಮತ್ತು ಟಿಎಂಸಿ ನಡುವೆ ಸಮಬಲದ ಹೋರಾಟ ಇರಲಿದೆ ಎಂದು ಹೇಳಿದ್ದವು. ಆದರೆ ಫಲಿತಾಂಶ ಬಂದಾಗ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 215 ಸ್ಥಾನಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಿತ್ತು. ಬಿಜೆಪಿ ಕೇವಲ 77 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಹೀಗಾಗಿ, ಎಕ್ಸಿಟ್ ಪೋಲ್ ಅಂಕಿ-ಅಂಶಗಳನ್ನೇ ಅಂತಿಮ ಫಲಿತಾಂಶವೆಂದು ಭಾವಿಸಬಾರದೆನ್ನುವುದು ರಾಜಕೀಯ ವಿಶ್ಲೇಷಕರು ಅಭಿಪ್ರಾಯವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries