ಕಿನ್ಶಾಸಾ (ಕಾಂಗೊ): ಕಾಂಗೊದ ಇಟುರಿ ಪ್ರಾಂತ್ಯದಲ್ಲಿ ಎಬೋಲಾ ವೈರಾಣು ಸೋಂಕು ಪತ್ತೆಯಾಗಿದ್ದು, ಇದುವರೆಗೆ 65 ಸಾವು ಮತ್ತು 246 ಶಂಕಿತ ಪ್ರಕರಣಗಳು ದಾಖಲಾಗಿದೆ ಎಂದು ಉನ್ನತ ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ಆಫ್ರಿಕಾ ಸಿಡಿಸಿ ಶುಕ್ರವಾರ ತಿಳಿಸಿದೆ.
ಸಾವುಗಳು ಮತ್ತು ಶಂಕಿತ ಪ್ರಕರಣಗಳು ಹೆಚ್ಚಾಗಿ ಮೊಂಗ್ವಾಲು ಮತ್ತು ರಾಂಪರಾ ಆರೋಗ್ಯ ವಲಯಗಳಲ್ಲಿ ದಾಖಲಾಗಿವೆ ಎಂದು ಆಫ್ರಿಕಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಹೇಳಿಕೆಯಲ್ಲಿ ತಿಳಿಸಿದೆ.
ಪ್ರಯೋಗಾಲಯದಲ್ಲಿ ಪರೀಕ್ಷಿಸಿದ 20 ಮಾದರಿಗಳ ಪೈಕಿ 13 ಮಾದರಿಗಳಲ್ಲಿ ಎಬೋಲಾ ವೈರಸ್ ಪತ್ತೆಯಾಗಿವೆ ಎಂದು ಅದು ಹೇಳಿದೆ.
ಎಬೋಲಾ ವೈರಸ್ ಸಾಂಕ್ರಾಮಿಕವಾಗಿದ್ದು, ವಾಂತಿ, ರಕ್ತ ಅಥವಾ ವೀರ್ಯದಂತಹ ದೈಹಿಕ ದ್ರವಗಳ ಮೂಲಕ ಹರಡುತ್ತದೆ. ಇದು ತೀವ್ರ ಪರಿಣಾಮ ಬೀರುತ್ತದೆ.

