ನವದೆಹಲಿ: ನೈರುತ್ಯ ಮುಂಗಾರು ನಾಲ್ಕು ದಿನ ಮುಂಚಿತವಾಗಿ ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಮುನ್ಸೂಚನೆ ನೀಡಿದೆ.
ಸಾಮಾನ್ಯವಾಗಿ ಕೇರಳದಲ್ಲಿ ಜೂನ್ 1ರ ವೇಳೆಗೆ ಮುಂಗಾರು ಮಳೆ ಆರಂಭವಾಗುತ್ತದೆ. ಮುಂಗಾರು ಮಾರುತಗಳು ನಂತರ ಉತ್ತರ ಭಾರತದ ಕಡೆಗೆ ಸಾಗಿ, ದೇಶದ ಇತರ ಪ್ರದೇಶಗಳಿಗೂ ವ್ಯಾಪಿಸುತ್ತವೆ.
ಮಳೆ ಮುನ್ಸೂಚನೆ ನೀಡಿರುವ ಐಎಂಡಿ, 'ನೈಋತ್ಯ ಮುಂಗಾರು ಮಾರುತಗಳು ಸಾಮಾನ್ಯಕ್ಕಿಂತ ನಾಲ್ಕು ದಿನಗಳ ಮೊದಲು ಅಂದರೆ, ಮೇ 26ರಂದು ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ' ಎಂದು ತಿಳಿಸಿದೆ.
ಕಳೆದ ವರ್ಷ ಮುಂಗಾರು ಮಳೆಯು ಮೇ 24ರಂದೇ ಶುರುವಾಗಿತ್ತು ಎಂದೂ ಮಾಹಿತಿ ನೀಡಿದೆ.

