HEALTH TIPS

ಪ್ಲಸ್ ಟು ಪರೀಕ್ಷೆಯ ಫಲಿತಾಂಶ ಪ್ರಕಟ; ಶೇ. 77.97 ರಷ್ಟು ಉತ್ತೀರ್ಣ, 4.25 ಲಕ್ಷ ವಿದ್ಯಾರ್ಥಿಗಳಲ್ಲಿ 290398 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ತೇರ್ಗಡೆ

ತಿರುವನಂತಪುರಂ: ರಾಜ್ಯದಲ್ಲಿ ಪ್ಲಸ್ ಟು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಉತ್ತೀರ್ಣ ದರ ಶೇ.77.97 ರಷ್ಟು ದಾಖಲಾಗಿದೆ. ಕಳೆದ ವರ್ಷಕ್ಕಿಂತ ಉತ್ತೀರ್ಣ ದರದಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ. ಕಳೆದ ಬಾರಿಗಿಂತ ಶೇ. 0.16 ರಷ್ಟು ಹೆಚ್ಚಳವಾಗಿದೆ. ಹೈಯರ್ ಸೆಕೆಂಡರಿ ವಿಭಾಗದಲ್ಲಿ, 1990 ಶಾಲೆಗಳಲ್ಲಿ 372423 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 290398 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ. 


ಪರೀಕ್ಷೆಗೆ ಹಾಜರಾದವರು ಶೇ. 68.41 ರಷ್ಟು ಹುಡುಗರು. ಶೇ. 86.89 ರಷ್ಟು ಹುಡುಗಿಯರು. ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಅವರು ಸಚಿವಾಲಯದ ಪಿಆರ್‍ಡಿ ಚೇಂಬರ್‍ನಲ್ಲಿ ಫಲಿತಾಂಶ ಘೋಷಣೆ ಮಾಡಿದರು.

ಈ ಬಾರಿ 4.25 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಎರಡನೇ ವರ್ಷದ ಹೈಯರ್ ಸೆಕೆಂಡರಿ ಫಲಿತಾಂಶಗಳ ಜೊತೆಗೆ, ವೃತ್ತಿಪರ ಹೈಯರ್ ಸೆಕೆಂಡರಿ ಪರೀಕ್ಷೆಯ ಫಲಿತಾಂಶಗಳು ಸಹ ಲಭ್ಯವಿದೆ.

ಫಲಿತಾಂಶಗಳು ವಿವಿಧ ವೆಬ್‍ಸೈಟ್‍ಗಳು ಮತ್ತು ಮೊಬೈಲ್ ಅಪ್ಲಿಕೇಶನ್‍ಗಳಲ್ಲಿ ಲಭ್ಯವಿರುತ್ತವೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries